ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ನಟನೆಯ ಡೆವಿಲ್ ಸಿನಿಮಾ ಇಂದು ವಿಶ್ವಾದ್ಯಂತ ತೆರೆಗೆ ಬಂದಿದೆ.
ದರ್ಶನ್ ಅಭಿಮಾನಿಗಳಿಗೆ ಇಂದು ಹಬ್ಬವೇ ಸರಿ. ಎಲ್ಲ ಕಡೆಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಕೇವಲ ಬೆಂಗಳೂರು ಮಾತ್ರವಲ್ಲ ಜಿಲ್ಲೆಯ ವಿವಿದೆಡೆ ದರ್ಶನ್ ಅಭಿಮಾನಿಗಳ ಡೆವಿಲ್ ಸೆಲೆಬ್ರೇಷನ್ ಜೋರಾಗಿದೆ. ನಟ ದರ್ಶನ್ ಅನುಪಸ್ಥಿತಿಯಲ್ಲೇ ಈ ಸಿನಿಮಾ ಅದ್ದೂರಿಯಾಗಿ ತೆರೆ ಕಂಡಿದೆ. ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ ಇಂದು ಬೆಳಗ್ಗೆ 6:30ಕ್ಕೆ ಡೆವಿಲ್ ರಿಲೀಸ್ ಆಗಿದೆ. ಕೆಜಿ ರಸ್ತೆಯ ನರ್ತಕಿ, ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್, ಜೆಪಿನಗರ ಸಿದ್ದೇಶ್ವರ, ನವರಂಗ್, ಗೌಡನ ಪಾಳ್ಯ, ಶ್ರೀನಿವಾಸ, ಜೆಸಿ ರಸ್ತೆಯ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6:30 ಕ್ಕೆ ಡೆವಿಲ್ ಶೋ ಶುರು ಆಗಿತ್ತು. ಅಭಿಮಾನಿಗಳು ಪ್ರೀತಿಯ ನಟನಿಗೆ ಶಿಳ್ಳೆ, D boss ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.
ಡೆವಿಲ್ ಅಬ್ಬರಕ್ಕೆ ಚಿತ್ರಮಂದಿರಗಳೆಲ್ಲಾ ಸಿಂಗಾರಗೊಂಡಿತ್ತು. ನರ್ತಕಿ, ಸಿದ್ದೇಶ್ವರ, ನವರಂಗ್ ಪ್ರಸನ್ನ ,ಊರ್ವಶಿ ಚಿತ್ರಮಂದಿರಗಳಲ್ಲಿ ದರ್ಶನ್ ಡೆವಿಲ್ ಕಟೌಟ್ ತಲೆ ಎತ್ತಿದೆ. ಫ್ಯಾನ್ಸ್ ಅಂತೂ ಹಬ್ಬ ಜಾತ್ರೆಯೇ ಮಾಡುತ್ತಿದ್ದಾರೆ. ರಾಜ್ಯದ ನೂರಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6:30 ಡೆವಿಲ್ ಶೋ ಶುರುವಾಗಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಡೆವಿಲ್ ತಂಡದ ಜೊತೆ ದರ್ಶನ್ ಪತ್ನಿ ನಿಂತಿದ್ದು, ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ಇಷ್ಟು ದಿನಗಳಲ್ಲಿ ಯಾವತ್ತು ದರ್ಶನ್ ಸಿನಿಮಾವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಲು ಬಾರದ ಪತ್ನಿ ವಿಜಯಲಕ್ಷ್ಮಿ ಈ ಬಾರಿ ಅಭಿಮಾನಿಗಳ ಜೊತೆ ಸಿನಿಮಾ ನೋಡಿದ್ದಾರೆ.
ಅಭಿಮಾನಿಗಳ ಜೊತೆ ನರ್ತಕಿ ಚಿತ್ರಮಂದಿರದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಿನಿಮಾ ನೋಡಿದ್ದು, ತಾಯಿಗೆ ಮಗ ವಿನೀಶ್ ಕೂಡ ಸಾಥ್ ನೀಡಿದ್ದಾರೆ.



