HomeKarnataka Newsಮೈಸೂರಿನಲ್ಲಿ ಮೊದಲ ಬಾರಿ ದಸರಾ ಕಂಬಳ: ಚಿನ್ನದ ಪದಕ ಗೆದ್ದ ಸಸಿಹಿತ್ಲು ಕೋಣಗಳು!

ಮೈಸೂರಿನಲ್ಲಿ ಮೊದಲ ಬಾರಿ ದಸರಾ ಕಂಬಳ: ಚಿನ್ನದ ಪದಕ ಗೆದ್ದ ಸಸಿಹಿತ್ಲು ಕೋಣಗಳು!

For Dai;y Updates Join Our whatsapp Group

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕಂಬಳ ಕೂಟ ಅದ್ಧೂರಿಯಾಗಿ ನಡೆಯಿತು.

ಕರಾವಳಿಯ ಪ್ರಸಿದ್ಧ ಜಾನಪದ ಕ್ರೀಡೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಆಗಮಿಸಿದ್ದರು. ರಾತ್ರಿ 11 ಗಂಟೆಯವರೆಗೂ ನಡೆದ ಸ್ಪರ್ಧೆಗಳು ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿದವು.

ಕಂಬಳದ ಪ್ರಮುಖ ವಿಭಾಗವಾದ ಕೆನೆ ಹಲಗೆಯಲ್ಲಿ 11 ಜೋಡಿ ಕೋಣಗಳು ಸ್ಪರ್ಧಿಸಿದ್ದವು. 6.5 ಮೀಟರ್‌ ನಿಶಾನೆಗೆ ನೀರು ಚಿಮ್ಮಿಸಿ ಸಸಿಹಿತ್ಲು ವೆಂಕಟ ಪೂಜಾರಿ ಬೈಂದೂರು ಅವರ ಕೋಣಗಳು ಪ್ರಥಮ ಸ್ಥಾನ ಪಡೆದು 16 ಗ್ರಾಂ ಚಿನ್ನದ ಪದಕ ಗೆದ್ದವು. ಈ ಕೋಣಗಳನ್ನು ಬೈಂದೂರು ಮಹೇಶ್ ಪೂಜಾರಿ ಯಶಸ್ವಿಯಾಗಿ ಮುನ್ನಡೆಸಿದರು. ವಾಮಂಜೂರು ನವೀನಚಂದ್ರ ಆಳ್ವ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದವು.

ವಿವಿಧ ವಿಭಾಗಗಳ ವಿಜೇತರು:

ಕೆನೆ ಹಲಗೆ

  • ಪ್ರಥಮ: ಸಸಿಹಿತ್ಲು ವೆಂಕಟ ಪೂಜಾರಿ ಬೈಂದೂರು (ಹಲಗೆ ಏರಿದವರು: ಬೈಂದೂರು ಮಹೇಶ್ ಪೂಜಾರಿ)
  • ದ್ವಿತೀಯ: ವಾಮಂಜೂರು ನವೀನಚಂದ್ರ ಆಳ್ವ (ಹಲಗೆ ಏರಿದವರು: ಬೈಂದೂರು ಮಹೇಶ್ ಪೂಜಾರಿ)

ನೇಗಿಲು ಹಿರಿಯ:

  • ಪ್ರಥಮ: ಎಂಬತ್ತು ಬಡಗಬೆಟ್ಟು ಶ್ರೀಕಾಂತ್ ಶೆಟ್ಟಿ (ಓಡಿಸಿದವರು: ಕುಂದಾಬಾರಂದಾಡಿ ಸ್ವರೂಪ್)
  • ದ್ವಿತೀಯ: ಕಕ್ಕೆಪದವು ಪೆರ್ಗಾಲು ಬಾಬು ತನಿಯಪ್ಪ ಗೌಡ (ಓಡಿಸಿದವರು: ಕೃತಿಕ್ ಗೌಡ ಪೆರ್ಗಾಲ್)

ನೇಗಿಲು ಕಿರಿಯ:

  • ಪ್ರಥಮ: ಉಡುಪಿ ಕಕ್ಕುಂಜೆ ರಾಧಾ ನಿಲಯ ಸಂತೋಷ್ ಶಿವರಾಜ್ ಪೂಜಾರಿ (ಓಡಿಸಿದವರು: ಬೈಂದೂರು ವಿಶ್ವನಾಥ್ ದೇವಾಡಿಗ)
  • ದ್ವಿತೀಯ: ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ (ಓಡಿಸಿದವರು: ಕುಂದಬಾರಂದಾಡಿ ಮಾಸ್ತಿಕಟ್ಟೆ ಸ್ವರೂಪ್)

ಹಗ್ಗ ಹಿರಿಯ:

  • ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ (ಕೋಣಗಳು: ರಾಜ ಮತ್ತು ಶಬರೀಷ; ಓಡಿಸಿದವರು: ಕೃತಿಕ್ ಗೌಡ)
  • ದ್ವಿತೀಯ: ಎರ್ಮಾಳ್ ಪುಚ್ಚೊಟ್ಟು ಬಾಲಚಂದ್ರ ಲೋಕಯ್ಯ ಶೆಟ್ಟಿ (ಕೋಣಗಳು: ಮಣಿ ಮತ್ತು ಜಿಂಕೆ; ಓಡಿಸಿದವರು: ಪಡುಸಾಂತುರು ಪ್ರಥ್ವಿರಾಜ್ ಪೂಜಾರಿ)

ಹಗ್ಗ ಕಿರಿಯ:

  • ಪ್ರಥಮ: ಪದವು ಕಾನಡ್ಕ ಪ್ಲೇವಿ ಡಿಸೋಜಾ (ಓಡಿಸಿದವರು: ಕಾವೂರು ಸುದರ್ಶನ)
  • ದ್ವಿತೀಯ: ರೋಹಿತ್ ಹೆಗ್ಡೆ ಎರ್ಮಾಳ್ (ಓಡಿಸಿದವರು: ಶ್ರೀನಿವಾಸ ಗೌಡ)

ಅಡ್ಡಹಲಗೆ:

  • ಪ್ರಥಮ: ಇರುವೈಲು ದೊಡ್ಡಗುತ್ತು ಜಗದೀಶ್ ಶೆಟ್ಟಿ (ಹಲಗೆ ಏರಿದವರು: ತೆಕ್ಕಟ್ಟೆ ಸುದೀರ್ ದೇವಾಡಿಗ)
  • ದ್ವಿತೀಯ: ವಿಟ್ಲ ಕುಂಡಡ್ಕ ಮರುವಾಳ ಜಯಂತ್ ದಾಸ್ (ಹಲಗೆ ಏರಿದವರು: ಉಳ್ಳೂರು ಕಂದಾವರ ಗಣೇಶ್)

ಮೈಸೂರು ದಸರಾ ಕಂಬಳವು ಕರಾವಳಿಯ ಜಾನಪದ ಪರಂಪರೆಯನ್ನು ನಾಡಿನ ಜನರಿಗೆ ಪರಿಚಯಿಸುವ ವೇದಿಕೆಯಾಯಿತು. ಸಾವಿರಾರು ಜನರು ಸ್ಪರ್ಧೆಗಳನ್ನು ವೀಕ್ಷಿಸಿ ಸಂಭ್ರಮಿಸಿದರು. ಈ ಮೂಲಕ ಕರಾವಳಿ ಮತ್ತು ರಾಜ್ಯದ ಇತರ ಭಾಗಗಳ ಜನರನ್ನು ಬೆಸೆಯುವಲ್ಲಿ ಕಂಬಳ ಕೂಟ ಯಶಸ್ವಿಯಾಯಿತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img