ಮೈಸೂರು:- ಡಿಸಿಎಂ ಕಡೆ ಸಿದ್ದು ಕಡೆ; ಸಿಎಂ ನಡೆ ಡಿಕೆಶಿ ಕಡೆ, ಶಾಸಕನ ನಡೆ ಬೇರೆ ಕಡೆ ಎಂದು ಹೇಳುವ ಮೂಲಕ ಬಿವೈ ವಿಜಯೇಂದ್ರ ವ್ಯಂಗ್ಯವಾಡಿದರು.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನವೆಂಬರ್ನಲ್ಲಿ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗಲಿದೆ. ಸಿಎಂ ಸಿದ್ದರಾಮಯ್ಯ ನಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಡೆ ಇದೆ. ಡಿ.ಕೆ.ಶಿವಕುಮಾರ್ ನಡೆ ಸಿದ್ದರಾಮಯ್ಯ ಕಡೆ ಇದೆ. ಆದರೆ ಶಾಸಕರ ನಡೆ ಬೇರೆ ಕಡೆ ಇದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಇನ್ನು ರಾಜಕೀಯ ಅಲ್ಲೋಲ ಕಲ್ಲೋಲವಾದಾಗ ಬಿಜೆಪಿ ನಡೆ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸಮರ್ಥ ಪ್ರತಿಪಕ್ಷವಾಗಿ ಕೆಲಸ ಮಾಡಲಿದೆ. ರಾಜಕೀಯ ಅವಕಾಶ ಬಂದರೆ ಆಗ ನೋಡೋಣ ಎಂದಿದ್ದಾರೆ.