ಬೆಕ್ಕುಗಳಿಗೆ ವಕ್ಕರಿಸಿದೆ ಮಾರಣಾಂತಿಕ ಎಫ್ʼಪಿವಿ ವೈರಸ್..! ಇರಲಿ ಎಚ್ಚರ

0
Spread the love

ರಾಯಚೂರು: ಡೆಂಗಿ, ಮಲೇರಿಯಾ, ಕೋವಿಡ್‌ನಂತಹ ಕಾಯಿಲೆಗಳು ಮನುಷ್ಯನ ಜೀವವನ್ನು ಹಿಪ್ಪಿಹಿಂಡಿದಂತೆ ರಾಜ್ಯದಾದ್ಯಂತ ಬೆಕ್ಕುಗಳಿಗೂ ಸಾಂಕ್ರಾಮಿಕ ರೋಗಬಾಧೆ ಎದುರಾಗಿದ್ದು, ರಾಜ್ಯದೆಲ್ಲೆಡೆ ಈಗ ಬೆಕ್ಕುಗಳಿಗೆ  ವಕ್ಕರಿಸಿದ ಮಾರಣಾಂತಿಕ ಎಫ್​ಪಿವಿ ವೈರಸ್ ಸೋಂಕು ಹರಡುತ್ತಿರುವುದು ತಿಳಿದುಬಂದಿದೆ.

Advertisement

ಹೀಗಾಗಿ ಮನೆಗಳಲ್ಲಿ ಬೆಕ್ಕು ಸಾಕುತ್ತಿರುವವರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ವೈರಸ್ ಸೋಂಕಿನಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಬೆಕ್ಕುಗಳು ಸಾವನ್ನಪ್ಪುತ್ತಿವೆ ಬೆಕ್ಕುಗಳು. ಜಿಲ್ಲೆಯಲ್ಲಷ್ಟೇ ಅಲ್ಲದೆ, ರಾಜ್ಯದ ವಿವಿದೆಡೆ ವೈರಸ್ ಸೋಂಕು ಹರಡುತ್ತಿದೆ. ರಾಯಚೂರಿನಲ್ಲಿ ಕಳೆದ ಒಂದು ತಿಂಗಳಲ್ಲಿ ನೂರಕ್ಕೂ ಹೆಚ್ಚು ಬೆಕ್ಕುಗಳಲ್ಲಿ ವೈರಾಣು ಪತ್ತೆಯಾಗಿದೆ.

ವೈರಸ್ ಸೋಂಕು ತಗುಲಿದಲ್ಲಿ ಬೆಕ್ಕುಗಳು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಸೋಂಕು ತಗುಲಿದೆ 100 ಬೆಕ್ಕುಗಳಲ್ಲಿ 99 ಸಾವನ್ನಪ್ಪುವ ಸಾಧ್ಯತೆ ಇದೆ.

ಅತಿ ವೇಗದಲ್ಲಿ ಹರಡುತ್ತೆ ಎಫ್​ಪಿವಿ ವೈರಸ್

ಒಂದು ಕಡೆ 10 ಬೆಕ್ಕುಗಳಿದ್ದರೆ, ಆ ಪೈಕಿ ಒಂದು ಬೆಕ್ಕಿಗೆ ವೈರಸ್ ಸೋಂಕು ತಗಲಿದರೆ ಕೆಲವೇ ಸೆಕೆಂಡುಗಳಲ್ಲಿ ಸಮೀಪದ ಎಲ್ಲಾ ಬೆಕ್ಕುಗಳಿಗೂ ವೈರಸ್ ಹರಡುತ್ತದೆ. ಇದರಿಂದಾಗಿ ಬೆಕ್ಕು ಸಾಕಾಣಿಕೆ ಮಾಡುವವರಿಗೆಬೆ, ಕ್ಕುಗಳನ್ನು ಹೊಂದಿರುವವರಿಗೆ ಆತಂಕ ಉಂಟಾಗಿದೆ.


Spread the love

LEAVE A REPLY

Please enter your comment!
Please enter your name here