HomeEntertainmentಮೇಘನಾ ಗಾಂವ್ಕರ್‌ʼಗೆ ಡಾಕ್ಟರೇಟ್‌ ಪದವಿ: 6 ವರ್ಷಗಳ ಶ್ರಮದ ಫಲ ಎಂದ ನಟಿ!

ಮೇಘನಾ ಗಾಂವ್ಕರ್‌ʼಗೆ ಡಾಕ್ಟರೇಟ್‌ ಪದವಿ: 6 ವರ್ಷಗಳ ಶ್ರಮದ ಫಲ ಎಂದ ನಟಿ!

For Dai;y Updates Join Our whatsapp Group

ಮುಂಬೈ ವಿಶ್ವವಿದ್ಯಾಲಯದಲ್ಲಿ ಸಿನಿಮಾ ಮತ್ತು ಸಾಹಿತ್ಯ ವಿಷಯದಲ್ಲಿ ನಟಿ ಮೇಘನಾ ಗಾಂವ್ಕರ್ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಖುಷಿಯ ವಿಚಾರವನ್ನು ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾವು ಪಿಎಚ್‌ಡಿ ಮಾಡಿದ ಜರ್ನಿ ಬಗ್ಗೆ ಮೇಘನಾ ಮಾತನಾಡಿ, ಇವತ್ತು ನಾನು ನಿಮ್ಮೆಲ್ಲರ ಜೊತೆ ಹೆಮ್ಮೆಯ ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ.

https://www.instagram.com/reel/DHkSrhfMh6b/?utm_source=ig_embed&ig_rid=faa35ee1-9632-41b4-8410-1249998bd3b2

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ 6 ವರ್ಷಗಳಿಂದ ನಾನು ನನ್ನ ಪಿಎಚ್‌ಡಿ ಮಾಡುತ್ತಿದ್ದೆ. 2024ರ ಅಕ್ಟೋಬರ್‌ನಲ್ಲಿ ನಾನು ನನ್ನ ಪಿಎಚ್‌ಡಿ ವರದಿಯನ್ನು ಯಶಸ್ವಿಯಾಗಿ ಸಲ್ಲಿಸಿದ್ದೆ. ಕಳೆದ ವಾರ ನನ್ನ ವೈವಾ ಕೂಡ ಆಯ್ತು. ಇವತ್ತು ನಾನು ನನ್ನ ಡಾಕ್ಟರೇಟ್ ಪದವಿಯನ್ನು ಹೆಮ್ಮೆಯಿಂದ ಸ್ವೀಕರಿಸಿದ್ದೇನೆ. ಇದು ತುಂಬಾ ವಿಶೇಷವಾದದ್ದು. ಯಾಕೆಂದರೆ ಈ ಪಿಎಚ್‌ಡಿ ಪಯಣ ಅಷ್ಟು ಸುಲಭ ಆಗಿರಲಿಲ್ಲ ಎಂದಿದ್ದಾರೆ.

ನಾನು ನನ್ನ ಈ ಪಿಎಚ್‌ಡಿ ಡಾಕ್ಟರೇಟ್ ಪದವಿಯನ್ನು ನನ್ನ ತಂದೆಗೆ ಅರ್ಪಿಸುತ್ತೇನೆ. ಯಾಕೆಂದರೆ ನಾನು ಪಿಎಚ್‌ಡಿ ಮಾಡಬೇಕು ಎನ್ನುವುದು ನನ್ನ ತಂದೆಯ ಕನಸಾಗಿತ್ತು. ನನ್ನ ಪಿಎಚ್‌ಡಿ ವಿಷಯ ಸಿನಿಮಾ ಮತ್ತು ಸಾಹಿತ್ಯ ಆಗಿತ್ತು. ಈ ವಿಷಯ ನನಗೆ ತುಂಬಾ ಹತ್ತಿರವಾಗಿತ್ತು. ಈ ವಿಡಿಯೋ ಮೂಲಕ ನಾನು ನಿಮಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ.

ಯಾಕೆಂದರೆ ನಾನು ಮೊದಲು ಪಿಎಚ್‌ಡಿ ಬಗ್ಗೆ ಹೇಳಿಕೊಂಡ ದಿನದಿಂದ ಈವರೆಗೆ ನೀವೆಲ್ಲರೂ ನನಗೆ ತುಂಬಾ ಬೆಂಬಲಿಸಿದ್ದೀರಿ. ಈ ಪಯಣದಲ್ಲಿ ನನ್ನ ಜೊತೆಯಲ್ಲಿ ನಿಂತಿರುವುದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು ಎಂದಿದ್ದಾರೆ. ನಟಿಯ ಸಾಧನೆಗೆ ಅಭಿಮಾನಿಗಳು, ಸ್ಯಾಂಡಲ್‌ವುಡ್ ಕಲಾವಿದರು ಮೆಚ್ಚುಗೆ ಸೂಚಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img