ಗದಗ: ಗದಗಿನ ಬ್ರಾಹ್ಮಣ ಸಮಾಜದ ಹಿರಿಯರೂ, ಬ್ರಹ್ಮ ಚೈತನ್ಯರ ಹಾಗೂ ಶ್ರೀ ತ್ರಿಕೂಟೆಶ್ವರನ ಅನನ್ಯ ಭಕ್ತರೂ ಹಾಗೂ ಧಾರ್ಮಿಕ ಚಿಂತಕರೂ ಆದ ಉಷಾಬಾಯಿ ಚಿದಂಬರ ಪೂಜಾರ ಗುರುವಾರ ಕೈಲಾಸವಾಸಿಗಳಾದರು.
Advertisement
ದಿವಂಗತರು ಸಿವಿಲ್ ಇಂಜಿನಿಯರ್ ರವಿ ಪೂಜಾರರ ಮಾತೋಶ್ರಿಯವರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಅದೇ ದಿನ ರಾತ್ರಿ 8.30ಕ್ಕೆ ನಡೆಯಿತು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅದ್ವೈತ ಪ್ರಸಾರ ಪರಿಷತ್, ಶ್ರೀ ಶಂಕರ ಮಠ ಸೇವಾ ಸಮಿತಿ ಹಾಗೂ ಗದಗ ಜಿಲ್ಲಾ ಬ್ರಾಹ್ಮಣ ಸಂಘದ ಎಲ್ಲ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.