ಹಾಸನ:- ಹಾಸನದ ಕೆಂಚನಹಳ್ಳಿ ಗ್ರಾಮದಲ್ಲಿ ಹೆಜ್ಜೇನು ದಾಳಿಯಿಂದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಸಾವಿಗೀಡಾದ ಘಟನೆ ಜರುಗಿದೆ.
55 ವರ್ಷದ ಜಗದೀಶ್ ಮೃತ ರೈತ. ಅವರು ತಮ್ಮ ಜಮೀನಿನಲ್ಲಿ ದಿನಚರಿಯಂತೆ ಕೃಷಿ ಕಾರ್ಯಗಳಲ್ಲಿ ತೊಡಗಿದ್ದಾಗ ಜೇನು ದಾಳಿ ನಡೆಸಿದೆ. ತೀವ್ರ ಅಸ್ವಸ್ಥಗೊಂಡ ಅವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಜಗದೀಶ್ ಅವರು ಆಕಸ್ಮಿಕವಾಗಿ ಹೆಜ್ಜೇನಿನ ಗೂಡನ್ನು ಅಲುಗಿಸಿದ ಪರಿಣಾಮ ದಾಳಿ ಮಾಡಿವೆ. ಬಹಳ ಸಂಖ್ಯೆಯಲ್ಲಿ ಹೆಜ್ಜೇನುಗಳು ಕಚ್ಚಿದ ಪರಿಣಾಮ, ಅವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.



