ಶಿವಮೊಗ್ಗ: ರಾಜಧಾನಿ ದೆಹಲಿಯನ್ನು ಬೆಚ್ಚಿಬೀಳಿಸಿದ ಭೀಕರ ಸ್ಪೋಟದ ಘಟನೆಯ ನಂತರ ದೇಶದಾದ್ಯಂತ ಆತಂಕದ ವಾತಾವರಣ ಮನೆ ಮಾಡಿದೆ. ನವೆಂಬರ್ 10 ರಂದು ಕೆಂಪು ಕೋಟೆಯ ಬಳಿ ಸಂಭವಿಸಿದ ಈ ಸ್ಪೋಟದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೇ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ದೆಹಲಿ ಬ್ಲಾಸ್ಟ್ಗೆ ಅತ್ಯಂತ ವ್ಯವಸ್ಥಿತವಾದ ಪಿತೂರಿ ಮಾಡಿದ್ದರು. ಅಲ್ಯೂಮೀನಿಯಂ ಸಲ್ಪೇಟ್ ರಾಸಾಯನಿಕ ಬಳಕೆ ಮಾಡಿ ಬ್ಲಾಸ್ಟ್ ಮಾಡಿದ್ದಾರೆ. ಇದರ ಹೊಣೆಹೂತ್ತವರಿಗೆ ಗತಿ ಕಾಣಿಸುವುದಾಗಿ ಪ್ರಧಾನಮಂತ್ರಿ ಹಾಗು ಗೃಹ ಸಚಿವರು ಹೇಳಿದ್ದಾರೆ.
ದೊಡ್ಡ ಅನಾಹುತವಾಗುವುದನ್ನು ತಡೆದಿದ್ದಾರೆ. ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಲಾಗಿದೆ. ಬಹಳ ಪ್ರಮಾಣದಲ್ಲಿ ಈ ಕೃತ್ಯದಲ್ಲಿ ಒಂದು ಸಮಾಜದವರು ಭಾಗಿಯಾಗಿರುವುದು ಜಗಜ್ಜಾಹೀರಾಗಿದೆ. ಇದನ್ನು ನಾನು ಖಂಡಿಸುತ್ತೇನೆ. ಸ್ವಲ್ಪ ಯಾಮಾರಿದ್ದರೂ ಸಹ ದೊಡ್ಡ ಅನಾಹುತವಾಗುತ್ತಿತ್ತು. ಬಹಳ ಆಶ್ಚರ್ಯಕರ ಸಂಗತಿ ಎಂದರೆ, ದಾಳಿ ಹಿಂದೆ ಇರುವವರು ಮಹಿಳಾ ಹಾಗೂ ಪುರುಷ ವೈದ್ಯರು ಎಂದರು.


