HomeGadag Newsಇನ್ನರ್‌ವ್ಹೀಲ್‌ನಿಂದ ಶಾಲೆಗಳಿಗೆ ಖುರ್ಚಿ ವಿತರಣೆ

ಇನ್ನರ್‌ವ್ಹೀಲ್‌ನಿಂದ ಶಾಲೆಗಳಿಗೆ ಖುರ್ಚಿ ವಿತರಣೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಸರಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ ಅಭಿವೃದ್ಧಿಪಡಿಸುವುದೇ ನಮ್ಮ ಪ್ರಯತ್ನವಾಗಿದ್ದು, ಅದಕ್ಕಾಗಿ ಸರಕಾರಿ ಶಾಲೆಗಳನ್ನು ದತ್ತು ಪಡೆದು ಸಹಕಾರ ಮನೋಭಾವದಿಂದ ಸೇವೆ ಮಾಡಲಾಗುವದು ಎಂದು ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಲಿಟರೇಚರ್ ಕಮಿಟಿ ಚೇರಮನ್ ಸುಮಾ ಪಾಟೀಲ ಹೇಳಿದರು.

ಅವರು ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್‌ನಿಂದ ದತ್ತು ಪಡೆದ ಶಾಲೆಗಳಾದ ಸರಕಾರಿ ಶಾಲೆ ನಂ.6 ಹಾಗೂ ನಂ. 12ರ ವಿದ್ಯಾರ್ಥಿಗಳಿಗೆ ಕ್ಲಬ್‌ನಿಂದ ಖುರ್ಚಿಗಳನ್ನು ವಿತರಿಸಿ ಮಾತನಾಡಿದರು.

ವರ್ಷಪೂರ್ತಿ ಈ ಶಾಲೆಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಅವರ ಅವಶ್ಯಕತೆಗಳನ್ನು ಪೂರೈಸಲಾಗುವದು ಎಂದರು.

ಕ್ಲಬ್ ಕಾರ್ಯದರ್ಶಿ ವೀಣಾ ತಿರ್ಲಾಪೂರ ಮಾತನಾಡಿ, ಇಲ್ಲಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಸಿಗುತ್ತಿದ್ದು, ಶಾಲೆಗಳೊಂದಿಗೆ ನಾವೂ ಕೈಜೋಡಿಸಬೇಕಾಗಿದೆ ಎಂದರು.

ಕ್ಲಬ್‌ನ ಹಿರಿಯರಾದ ಶ್ರೇಯಾ ಪವಾಡಶೆಟ್ಟರ, ರಾಜೇಶ್ವರಿ ಬಳ್ಳಾರಿ, ಮುಖ್ಯೋಪಾಧ್ಯಾಯರಾದ ಎಚ್.ಆರ್. ಕೋಣಿಮನಿ ಹಾಗೂ ವೀಣಾ ಮುತಾಲಿಕದೇಸಾಯಿ ಮಾತನಾಡಿದರು. ವೇದಿಕೆಯ ಮೇಲೆ ಪ್ರೇಮಾ ಗುಳಗೌಡ್ರ, ಕ್ಲಬ್ ಅಧ್ಯಕ್ಷೆ ನಾಗರತ್ನಾ ಮಾರನಬಸರಿ, ಐಎಸ್‌ಓ ಪುಷ್ಪಾ ಭಂಡಾರಿ ಹಾಗೂ ಮೀನಾಕ್ಷೀ ಕೊರವನವರ ಉಪಸ್ಥಿತರಿದ್ದರು.

ಮಹಾಲಕ್ಷ್ಮಿ ತೊಂಡಿಹಾಳ ಪ್ರಾರ್ಥಿಸಿದರು, ಎಸ್.ಎಂ. ಹಳೇಮನಿ ಸ್ವಾಗತಿಸಿದರು. ಎಸ್.ಎಂ. ಕರಡಕಲ್ಲ ನಿರೂಪಿಸಿದರು. ವೈಎಚ್. ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಸ್.ಎಸ್. ವನಹಳ್ಳಿ ವಂದಿಸಿದರು.

ಎಸ್.ಬಿ. ಕಣಕಿ ಹಾಗೂ ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್‌ನ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img