ಬೀದಿ ದೀಪಗಳ ಅಳವಡಿಕೆಗೆ ಪುರಸಭೆ ಮುಖ್ಯಾಧಿಕಾರಿಗೆ ಆಗ್ರಹ

0
Demand for installation of street lights
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಬೀದಿ ದೀಪಗಳನ್ನು ಅಳವಡಿಕೆ ಹಾಗೂ ದುರಸ್ತಿಗೆ ಮುಂದಾಗಬೇಕು ಎಂದು ಸ್ಥಳೀಯ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.

Advertisement

ಪಟ್ಟಣದ 1ನೇ ವಾರ್ಡಿನಲ್ಲಿ ಪುರಸಭೆ ಮಾಜಿ ಸದಸ್ಯರ ನಿವಾಸದೆದುರಿನ ಬೀದಿ ದೀಪ ದುರಸ್ಥಿಗೆ ಬಂದು ಕೆಲ ತಿಂಗಳು ಗತಿಸಿದ್ದರೂ ಪುರಸಭೆಯಿಂದ ದುರಸ್ತಿಗೆ ಮುಂದಾಗದಿರುವುದು ವಿಪರ್ಯಾಸ. ಇತ್ತ ಅದೇ ವಾರ್ಡಿನ ವಿರುಪಾಕ್ಷೇಶ್ವರ ದೇವಸ್ಥಾನ ಬಳಿಯ ಹೈ ಮಾಸ್ಟ್ ದೀಪವು ಸಹ ಬಂದ್ ಆಗಿ ತಿಂಗಳು ಗತಿಸುತ್ತಾ ಬಂದಿದೆ.

ಆದರೆ ಸಂಬಂದಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಇತ್ತ ಗಮನ ನೀಡಿಲ್ಲ ಎಂದ ದೂರಿದ ಸಂಘಟನೆಯ ಕಾರ್ಯಕರ್ತರು, ಪಟ್ಟಣದಲ್ಲಿ ಸಾರ್ವಜನಿಕರಿಂದ ಕರವನ್ನು ತುಂಬಿಸಿಕೊಳ್ಳುವ ಪುರಸಭೆ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಮೀನಮೇಷ ಮಾಡುತ್ತಿದೆ ಎಂದು ಆರೋಪಿಸಿದರು.

ಡೆ ನಲ್ಮ ಯೋಜನಾಧಿಕಾರಿ ಬಿ.ಮಲ್ಲಿಕಾರ್ಜುನಗೌಡ ಮನವಿ ಸ್ವೀಕರಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಭೀಮಣ್ಣ ಇಂಗಳೆ, ಜಗದೀಶ ಮಡಿವಾಳರ, ಮಾರುತಿ ಬರಗಿ, ಮುತ್ತಣ್ಣ ರೇಣಿ, ಹನಮಂತ ಘೋರ್ಪಡೆ, ಅಶೋಕ ಮುದೇನೂರ, ವೆಂಕಟೇಶ ಚಿನ್ನೂರ, ರಮೇಶ ಯರಗೇರಿ, ಅಶೋಕ ಕುಂಬಾರ, ಸಂಗಪ್ಪ ಪಂತಗರಾಯ, ರಾಜು ಮಾಳೊತ್ತರ, ಪರಶುರಾಮ ಚವ್ಹಾಣ, ಭೀಮನಗೌಡ ಗೌಡ್ರ ಮುಂತಾದವರಿದ್ದರು.

 


Spread the love

LEAVE A REPLY

Please enter your comment!
Please enter your name here