ಪೆನ್‌ಡ್ರೈವ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಆಗ್ರಹ

0
manavi
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹಾಸನದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರರ ಪಾತ್ರ ನೇರವಾಗಿ ಇರುವದಾಗಿ ಬಿಜೆಪಿಯ ಮುಖಂಡ ದೇವರಾಜೇಗೌಡ ಸಾಕ್ಷಿ ಸಮೇತ ಸುದ್ದಿ ಮಾಧ್ಯಮದಲ್ಲಿ ಆಪಾದಿಸಿದ್ದು, ಈ ಕೂಡಲೇ ರಾಜ್ಯಪಾಲರು ಹಾಗೂ ಪ್ರಧಾನಮಂತ್ರಿಗಳು ಮಧ್ಯಸ್ತಿಕೆ ವಹಿಸಿ ಜೆಡಿಎಸ್ ಪಕ್ಷದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರು ಮತ್ತು ಅವರ ಪುತ್ರನ ಮೇಲೆ ದಾಖಲಾಗಿರುವ ದೌರ್ಜನ್ಯ ಪ್ರಕರಣವನ್ನು ಎಸ್‌ಐಟಿ ಬದಲಿಗೆ ಕೇಂದ್ರದ ಸಿಬಿಐ ಸಂಸ್ಥೆಗಳಿಂದ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಮೇಟಿ ನೇತೃತ್ವದಲ್ಲಿ ಗದಗ ಜಿಲ್ಲೆಯ ಜೆಡಿಎಸ್ ಪಕ್ಷದ ಪದಾಧಿಕಾರಿಗಳು, ರಾಜ್ಯ ಪದಾಧಿಕಾರಿಗಳು, ಕಾರ್ಯಕರ್ತರು ನಗರದ ಗಾಂಧಿ ವೃತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಹಾಗೂ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದರು.

Advertisement

ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಮುಖಂಡರಾದ ವಿ.ಆರ್. ಗೋವಿಂದಗೌಡ್ರು, ಈರಣ್ಣ ಬಾಳಿಕಾಯಿ, ಮುಖಂಡರಾದ ಹಾಜಿಅಲಿ ಕೊಪ್ಪಳ, ಪ್ರವೀಣ್ ಬಾಳಿಕಾಯಿ, ಎಂ.ಎಸ್. ಪರ್ವತಗೌಡ್ರ‍್ರ, ಸಂಶಿ ವಕೀಲರು, ಪ್ರಫುಲ್ ಪುಣೇಕರ್, ಸಿರಾಜ್ ಕದಡಿ, ರಾಜೇಸಾಬ್ ತಹಸೀಲ್ದಾರ್, ರಸೂಲ್ ಬಳ್ಳಾರಿ, ತಿಪ್ಪಣ್ಣ ಹುಡೇದ, ಸಂಗಪ್ಪ ಯಲಬುಂಚಿ, ಮಂಜುನಾಥ ದೊಡ್ಡಮನಿ, ವಿನಾಯಕ್ ಪರ್ವತ್, ಲಲಿತ ಕಲ್ಲಪ್ಪನವರ್, ಜಯರಾಜ್ ವಾಲಿಕಾರ್ ಸೇರಿದಂತೆ ಪಕ್ಷದ ಕಾರ್ಯಕರ್ತರು, ಅಪಾರ ಅಭಿಮಾನಿಗಳು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here