ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸಿ, ಸಾರಿಗೆ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಾರ್ಯಾಚರಣೆಯನ್ನು ಉತ್ತಮಪಡಿಸಲು ನಗದುರಹಿತ UPI ವಹಿವಾಟುಗಳ ಮೂಲಕ ಟಿಕೆಟ್ ವಿತರಣೆಯನ್ನು ಸಂಸ್ಥೆಯ 50 ಘಟಕಗಳಲ್ಲಿ ನಿರ್ವಹಿಸಲಾಗುತ್ತಿದೆ.
ನವಂಬರ್-2024ರ ಅಂತ್ಯದವರೆಗೆ ಒಟ್ಟು 70.15ಲಕ್ಷ UPI ವಹಿವಾಟುಗಳಿಂದ ರೂ. 65.06ಕೋಟಿ ಸಂಗ್ರಹವಾಗಿರುತ್ತದೆ. ಪ್ರಸ್ತುತ ಸಂಸ್ಥೆಯ ವಿವಿಧ ವಿಭಾಗಗಳ ವಾಣಿಜ್ಯ ಆದಾಯದ ಹಣವನ್ನು UPI ಮೂಲಕ ಪಾವತಿಸಿಕೊಳ್ಳುವ ವ್ಯವಸ್ಥೆಯನ್ನು ಆಗಸ್ಟ್-೨೦೨೪ರಿಂದ ಪ್ರಾರಂಭಿಸಲಾಗಿದ್ದು, ನವಂಬರ್ ಅಂತ್ಯದವರೆಗೆ ಒಟ್ಟು 21636 UPI ವಹಿವಾಟುಗಳಿಂದ ರೂ. 4.97 ಕೋಟಿ ವಾಣಿಜ್ಯ ಆದಾಯ ಸಂಗ್ರಹವಾಗಿರುತ್ತದೆ ಎಂದು ಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ, ಭಾ.ಆ.ಸೇ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



