ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಶ್ರೀ ಶಂಕರ್ ನಾಯ್ಕ್ (ಕವಿರಾಜ್) ಇವರ ಸ್ವರಚಿತ ಸಂತ ಶ್ರೀ ಸೇವಾಲಾಲ್ ಅವರ `ತಾರ ಮಾರ ಭೇದ ಕಾಯಿರಾ ಭಾಯಾ’ ಭಕ್ತಿಗೀತೆ ಸಿ.ಕೆ. ಪ್ರೊಡಕ್ಷನ್ ಯುಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ.
Advertisement
ಗೀತೆಯು ಸ್ವತಃ ಕವಿರಾಜ್ ಅವರ ಕಂಠಸಿರಿಯಲ್ಲಿ ಮೂಡಿಬಂದಿದೆ. ಉತ್ತಮ ಸಾಹಿತ್ಯ ಮತ್ತು ಗಾಯನ ಮಾಡಿರುವ ಶಂಕರ್ ನಾಯ್ಕ್ ಇವರ ಗೀತೆಗೆ ಖ್ಯಾತ ಬಂಜಾರ ಗಾಯಕರಾದ ಶ್ರೀಕುಬೇರ ನಾಯ್ಕ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ ಅವರದಿದೆ. ಬಹುನಿರೀಕ್ಷಿತ ಕವಿರಾಜ್ ಇವರ ಅಭಿಮಾನಿಗಳು ಈ ಭಕ್ತಿ ಗೀತೆಯನ್ನು ಕೇಳಿ ಪ್ರೋತ್ಸಾಹ ನೀಡುವಂತೆ ಕವಿರಾಜ್ ವಿನಂತಿಸಿದ್ದಾರೆ.