ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಧನರಾಜ್ ಕೆನ್ನೆಗೆ ಹೊಡೆದ ಪತ್ನಿ..! ಅಂತದ್ದೇನಾಯ್ತು?

0
Spread the love

ಕನ್ನಡದ ಬಿಗ್​ಬಾಸ್​ ಸೀಸನ್​ 11 ದಿನದಿಂದ ದಿನಕ್ಕೆ ಹೊಸ-ಹೊಸ ಟ್ವಿಸ್ಟ್​ ಪಡೆದುಕೊಂಡು ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ಈ ವಾರ ಬಿಗ್​ಬಾಸ್​ ಸ್ಪರ್ಧಿಗಳು ಸಖತ್ ಖುಷಿಯಲ್ಲಿ ಇದ್ದಾರೆ. ಏಕೆಂದರೆ 94 ದಿನಗಳ ಕಾಲ ಸ್ಪರ್ಧಿಗಳು ತಮ್ಮ ತಮ್ಮ ಕುಟುಂಬಸ್ಥರನ್ನು ಮಿಸ್ ಮಾಡಿಕೊಂಡಿದ್ದರು. ಹೀಗಾಗಿ ಸ್ಪರ್ಧಿಗಳಿಗೆ ಬಿಗ್​ಬಾಸ್​ ಸರ್ಪ್ರೈಸ್​ ನೀಡಿದೆ.

Advertisement

ಅಂತೆಯೇ ಈ ವಾರ ಸ್ಪರ್ಧಿಗಳ ಒನ್ನೊಂದೇ ಕುಟುಂಬ ಬಿಗ್ ಮನೆಗೆ ಎಂಟ್ರಿ ಕೊಟ್ಟು, ಭಾವುಕ ಕ್ಷಣಕ್ಕೆ ಸಾಕ್ಷಿ ಆಗಿತ್ತು. ಅದರಂತೆ ಇಂದು ಧನರಾಜ್ ಅವರ ದೊಡ್ಡ ಕುಟುಂಬ ಬಿಗ್​ಬಾಸ್ ಮನೆಗೆ ಎಂಟ್ರಿಯಾಗಿದೆ.

ಕುಟುಂಬದ ಸದಸ್ಯರನ್ನು ನೋಡಿದ ಧನರಾಜ್ ಫುಲ್ ಖುಷ್ ಆಗಿದ್ದಾರೆ. ಅವರ ಪತ್ನಿ ಪ್ರಜ್ಞಾ ತಮ್ಮದೇ ಸ್ಟೈಲ್​​ನಲ್ಲಿ ಪತಿಯ ಕಾಲೆಳೆದು ಕ್ಲಾಸ್​ ತೆಗೆದುಕೊಂಡಿದ್ದಾರೆ. ನಾನು ಇಲ್ಲದೇ ನಿಮಗೆ ಭಾರೀ ಖುಷಿಯಾಗಿದೆ ಎಂದು ಪ್ರೀತಿಯಿಂದ ಹೊಡೆಯಲು ಶುರು ಮಾಡಿದ್ದಾರೆ. ಎಲ್ಲದಕ್ಕೂ ಐಶು ಹೆಸರು ತೆಗೆದುಕೊಳ್ತಿದ್ದೀರಿ. ನೀವು ಐಶುಗೆ ಲೈನ್ ಹೊಡೆಯುತ್ತಿದ್ದೀರಾ ಅಂತಾ ಡೌಟ್ ಎಂದು ಬಾರಿಸಿದ್ದಾರೆ. ಇವರಿಬ್ಬರ ಕ್ಯೂಟ್ ಕಿತ್ತಾಟವನ್ನು ನೋಡಿದ ಇತರೆ ಸ್ಪರ್ಧಿಗಳು ನಕ್ಕಿದ್ದಾರೆ.

ಅದಲ್ಲದೇ ಧನರಾಜ್ ಅವರ ಕೂಡು ಕುಟುಂಬ ಮನೆಗೆ ಎಂಟ್ರಿ ನೀಡಿದೆ. ಬಿಗ್​ಬಾಸ್​ ಮನೆಗೆ ಬಂದಿರುವ ಸದಸ್ಯರು ಹಲಿ ಕುಣಿತಕ್ಕೆ ಹೆಜ್ಜೆ ಹಾಕಿದೆ. ವಿಶೇಷವಾಗಿ ಧನರಾಜ್ ಅವರ ಮಗು ಕೂಡ ಬಿಗ್​ಬಾಸ್​ ಮನೆಗೆ ಬಂದಿದೆ. ಇಂದು ರಾತ್ರಿ ಧನರಾಜ್ ದಂಪತಿಗೆ ಸಂಬಂಧಿಸಿದ ಎಪಿಸೋಡ್ ಪ್ರಸಾರ ಆಗಲಿದ್ದು, ವೀಕ್ಷಕರು ಕಾತುರರಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here