ಧರ್ಮಸ್ಥಳ ಕೇಸ್: SIT ನೀಡುವ ಅಂತಿಮ ತೀರ್ಮಾನದ ಮೇಲೆ ಎಲ್ಲವೂ ನಿಂತಿದೆ – ಕೆ.ಎಸ್. ಈಶ್ವರಪ್ಪ

0
Spread the love

ಶಿವಮೊಗ್ಗ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ  SIT ನೀಡುವ ಅಂತಿಮ ತೀರ್ಮಾನದ ಮೇಲೆ ಎಲ್ಲವೂ ನಿಂತಿದೆ ಎಂದು  ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಎಸ್ಐಟಿ ಪ್ರಕರಣ ಇಂದಿನದಲ್ಲ, ಹಲವು ವರ್ಷಗಳಿಂದ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

Advertisement

ಕಾಣದ ವ್ಯಕ್ತಿ ಬಂದು ಹಲವೆಡೆ ಜಾಗ ತೋರಿಸುತ್ತಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಇನ್ನೂ ಯಾವುದೇ ಸ್ಪಷ್ಟ ತೀರ್ಮಾನ ಆಗಿಲ್ಲ. ಎಸ್ಐಟಿ ನೀಡುವ ಅಂತಿಮ ತೀರ್ಮಾನದ ಮೇಲೆ ಎಲ್ಲವೂ ನಿಂತಿದೆ ಎಂದು ಈಶ್ವರಪ್ಪ ಹೇಳಿದರು.

ಎಸ್‌ಸಿ-ಎಸ್‌ಟಿ ಅನುದಾನ ದುರ್ಬಳಕೆ ವಿಚಾರವಾಗಿಯೂ ಈಶ್ವರಪ್ಪ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯಾವುದೇ ಹಿಂದಿನ ಸರ್ಕಾರ ಈ ರೀತಿ ಹಣ ದುರ್ಬಳಕೆ ಮಾಡಿಲ್ಲ. ಅವರೇ ಹೇಳುವಂತೆ 37 ಸಾವಿರ ಕೋಟಿ ಹಣ ಬಳಸಿಕೊಂಡಿದ್ದಾರೆ. ಆ ಸಮಾಜಕ್ಕೆ ನ್ಯಾಯ ಕೊಡುವ ಕೆಲಸವನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

 


Spread the love

LEAVE A REPLY

Please enter your comment!
Please enter your name here