HomeDharwadಪರಿಹಾರದೊಂಗಿಗೆ ಹಣ ಪಾವತಿಸಲು ಆದೇಶ

ಪರಿಹಾರದೊಂಗಿಗೆ ಹಣ ಪಾವತಿಸಲು ಆದೇಶ

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಧಾರವಾಡ ಸರಸ್ವತಪೂರದ ನಿವಾಸಿಗಳಾದ ಪ್ರೀತಿ ಮತ್ತು ಅವರ ಮಗಳಾದ ಪೂರ್ವಿ ಇವರು ತಮ್ಮ ಗಂಡ/ತಂದೆ ಪ್ರಶಾಂತ ಶಾನಭಾಗ್ ಇವರು ಆಯ್‌ಸಿಆಯ್‌ಸಿಆಯ್ ಲೋಂಬಾರ್ಡ ಇವರಲ್ಲಿ ರೂ.1489 ಪ್ರೀಮಿಯಮ್ ಮತ್ತು ಅದರ ಜೊತೆಗೆ ಪಿ.ಎ. ಕವರೇಜ್ ಮಾಲೀಕ ಮತ್ತು ಡ್ರೈವರ್ ಗೆ ಹೆಚ್ಚಿನ ಮೊತ್ತ ರೂ.375 ಪಾವತಿಸಿ ವಿಮೆಯನ್ನು ಮಾಡಿಸಿದ್ದರು. 11/10/2022ರಂದು ಪ್ರಶಾಂತ ಶಾನಭಾಗ ರಸ್ತೆ ಅಪಘಾತದಲ್ಲಿ ಮರಣ ಹೊಂದಿದರು. ದೂರುದಾರರು ತಮ್ಮ ಗಂಡ/ತಂದೆಯ ವಿಮಾ ಹಣವನ್ನು ಕೊಡುವಂತೆ ಎದುರುದಾರರ ಕಂಪನಿಗೆ ದಾಖಲೆಗಳೊಂದಿಗೆ ಬೇಡಿಕೆಯನ್ನು ಇಟ್ಟಿದ್ದರು.

ಎದುರುದಾರರು ಇವರ ಕ್ಲೇಮನ್ನು ನಿರಾಕರಿಸಿ ಪ್ರಶಾಂತ ಶಾನಭಾಗ ಇವರು ಅಪಘಾತದ ಸಮಯದಲ್ಲಿ ಲೈಸನ್ಸ್ನನ್ನು ಹೊಂದಿಲ್ಲದ ಕಾರಣ ದೂರುದಾರರು ವಿಮಾ ಹಣವನ್ನು ಪಡೆಯಲು ಅರ್ಹರಲ್ಲವೆಂದು ಅವರ ಬೇಡಿಕೆಯನ್ನು ನಿರಾಕರಿಸಿದ್ದರು.

ವಿಮಾ ಕಂಪನಿಗೆ ಹಲವು ಬಾರಿ ವಿಮೆ ಹಣವನ್ನು ಪಾವತಿಸಲು ಕೇಳಿಕೊಂಡರೂ ಎದುರುದಾರರು ತಮಗೆ ವಿಮಾ ಹಣ ಅಥವಾ ಪರಿಹಾರ ಕೊಟ್ಟಿಲ್ಲ ಅಂತಹ ವಿಮಾ ಕಂಪನಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಆಗುತ್ತದೆ ಎಂದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು 11/07/2023ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪ್ರಭು. ಸಿ.ಹಿರೇಮಠ ಕೂಲಂಕುಷವಾಗಿ ವಿಚಾರಣೆ ನಡೆಸಿದರು. ಪ್ರಶಾಂತ ಇವರು ಹೊಂದಿದ ಡ್ರೈವಿಂಗ್ ಲೈಸನ್ಸ್ ಅವಧಿಯು 03/04/2022ರವರೆಗೆ ಇದ್ದು ಅವರ ಮರಣವು 11/10/2022ರಲ್ಲಿ ಆಗಿದ್ದು, ಎದುರುದಾರರ ಪ್ರಕಾರ ಅವರು ವಿಮಾ ಹಣವನ್ನು ಪಡೆಯಲು ಅರ್ಹರಲ್ಲರೆಂದು ಹೇಳಿತ್ತ್ತು. ದೂರುದಾರರ ವಕೀಲರು ಸಲ್ಲಿಸಿದ ದಾಖಲೆಗಳನ್ನು ಪರಿಗಣಿಸಿದಾಗ ಮೋಟರ್ ವಾಹನದ ಕಾಯ್ದೆಯ ಕಲಂ ಪ್ರಕಾರ ಪ್ರಶಾಂತ ಶಾನಭಾಗ ಇವರ ಲೈಸ್ಸನ್ಸ್ ಮುಂದಿನ 10 ವರ್ಷದವರೆಗೂ ಅನ್ವಯವಾಗುವ ಅಂಶಗಳನ್ನು ಸಾಬೀತುಪಡಿಸಿದಾಗ ಅದನ್ನು ಪರಿಶೀಲಿಸಿ ನೋಡಿದಾಗ ದೂರುದಾರರು ತಾವು ಕೇಳಿದಂತಹ ವಿಮಾ ಹಣವನ್ನು ಪಡೆಯಲು ಅರ್ಹರಿದ್ದಾರೆಂದು ಆಯೋಗವು ಅಭಿಪ್ರಾಯ ಪಟ್ಟು ಎದುರುದಾರರಿಗೆ ವಿಮಾ ಹಣ ರೂ.15 ಲಕ್ಷದ ಜೊತೆಗೆ ಅವರು ಅನುಭವಿಸಿದ ಮಾನಸಿಕ ಹಿಂಸೆ ಹಾಗೂ ಅನಾನುಕೂಲತೆಗೆ 50 ಸಾವಿರ ರೂ ಪರಿಹಾರ ಮತ್ತು 10 ಸಾವಿರ ರೂ ಪ್ರಕರಣದ ಖರ್ಚು-ವೆಚ್ಚ ಕೊಡುವಂತೆ ಆಯ್‌ಸಿಆಯ್‌ಸಿಆಯ್ ಲೋಂಬಾರ್ಡ ವಿಮಾ ಕಂಪನಿಗೆ ಆಯೋಗವು ಆದೇಶಿಸಿದೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!