ವಿಜಯಸಾಕ್ಷಿ ಸುದ್ದಿ, ಧಾರವಾಡ: ಗ್ರಾಮ ಪಂಚಾಯಿತಿ ಮಟ್ಟದ ಸಭೆಗಳು ಈಗಾಗಲೇ ಜರುಗಿದ್ದು, ಪಂಚ ಗ್ಯಾರಂಟಿ ಯೋಜನೆಯನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವುದು ಈ ಸಭೆಯ ಉದ್ದೇಶವಾಗಿದೆ ಎಂದು ಧಾರವಾಡ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅರವಿಂದಗೌಡ ಏಗನಗೌಡರ ಹೇಳಿದರು.
ಗುರುವಾರ ನಡೆದ ಧಾರವಾಡ ತಾಲೂಕು ಗ್ಯಾರಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಂತ ಹಂತವಾಗಿ ಧಾರವಾಡ ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಸಭೆ ಆಯೋಜಿಸಿ, ಕುಂದು-ಕೊರತೆ ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಪ್ರಯತ್ನಿಸೋಣ ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕರೆ ನೀಡಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರಾದ ಚಂದ್ರಶೇಖರ ಕದಂ, ಪರಮೇಶ್ವರ ಕರಿಕಟ್ಟಿ, ಮಂಜುನಾಥ ಉಡಿಕೇರಿ, ಮಿಲಿಂದ ಇಚಂಗಿ, ರಾಜೇಶ್ ಚವ್ಹಾಣ, ಜಾಫರ್ ಕಳ್ಳಿಮನಿ, ಕಲಾವತಿ ಭೀಮಕ್ಕನವರ, ಮೈಲಾರಗೌಡ ಪಾಟೀಲ, ಕಾರ್ತಿಕ ಗೋಕಾಕ, ಪರಮೇಶ್ವರ ಕಾಳೆ, ಸಮಿತಿಯ ಸದಸ್ಯ ಕಾರ್ಯದರ್ಶಿ ಗಂಗಾಧರ ಕಂದಕೂರ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಮಟ್ಟದ ಪಂಚ ಗ್ಯಾರಂಟಿ ಅನುಷ್ಠಾನ ಅಧಿಕಾರಿಗಳು ಹಾಜರಿದ್ದರು.


