ದರ್ಶನ್‌ ನೋಡಲು ಪರಪ್ಪನ ಅಗ್ರಹಾರಕ್ಕೆ ಬಂದ ಡಿಂಪಲ್‌ ಕ್ವಿನ್‌ ರಚಿತಾರಾಮ್!

0
Spread the love

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್​ʼರನ್ನ ಭೇಟಿ ಮಾಡಲು ರಚಿತಾ ರಾಮ್ ಆಗಮಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಡೆವಿಲ್​ ಗ್ಯಾಂಗ್ ಜೈಲು ಸೇರಿ 75 ದಿನಗಳಾಗ್ತಿದೆ. ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಇದೇ ಮೊದಲ ಬಾರಿಗೆ ರಚಿತಾ ರಾಮ್ ಜೈಲಿಗೆ ಆಗಮಿಸಿದ್ದಾರೆ.

Advertisement

ಈ ವೇಳೆ, ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ್ ಕೂಡ ನಟನನ್ನು ನೋಡಲು ಜೈಲಿಗೆ ಬಂದಿದ್ದಾರೆ. ಇನ್ನೂ ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ 2 ಬಾರಿಯಷ್ಟೇ ಭೇಟಿಯಾಗಲು ಅವಕಾಶವಿರುತ್ತದೆ.

ಕೊಲೆ ಕೇಸ್‌ ತನಿಖೆಯ ಅಂತಿಮ ಹಂತದಲ್ಲಿರುವ ಪೊಲೀಸರು ಇನ್ನೆರಡು ವಾರದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಚಾರ್ಜ್​ ಶೀಟ್​ ಸಲ್ಲಿಕೆ ವೇಳೆ ಸಾಕ್ಷ್ಯಗಳ ಆಧಾರದಲ್ಲಿ ದರ್ಶನ್​ ಎ1 ಆಗೋದು ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ. ಕೊಲೆ ಕೇಸಲ್ಲಿ A1 ಆಗಿರೋ ಪವಿತ್ರಾ ಗೌಡ ಅವರು ಈಗಾಗಲೇ ಜಾಮೀನಿಗಾಗಿ ಕೋರ್ಟ್‌ಗೆ ಮನವಿ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here