ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಆಯಾ ಗ್ರಾಮ ಪಂಚಾಯತಿಗಳಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರವನ್ನು ಸಕಾಲಕ್ಕೆ ಒದಗಿಸುವ ಯೋಜನೆಯನ್ನು ತಾಲೂಕಿನ ಗೋವನಾಳ ಗ್ರಾ.ಪಂ ನೂತನ ಅಧ್ಯಕ್ಷ ಅಣ್ಣಪ್ಪ ರಾಮಗೇರಿ ಅವರು ಮೊದಲನೇ ಪ್ರಮಾಣಪತ್ರವನ್ನು ಫಲಾನುಭವಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು. ಜನನ-ಮರಣ ಪ್ರಮಾಣಪತ್ರಗಳನ್ನು ಪಡೆಯಲು ಗ್ರಾಮೀಣ ಭಾಗದ ಜನರು ಸಾಕಷ್ಟು ಅಲೆದಾಡಬೇಕಾಗಿತ್ತು. ಅಲ್ಲದೆ ಕೆಲವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಅನೇಕರ ಹೆಸರುಗಳು ನೋಂದಣಿಯಾಗದೆ ಪರದಾಡುವಂತಹ ಪರಿಸ್ಥಿತಿ ಇತ್ತು. ಈ ನಿಟ್ಟಿನಲ್ಲಿ ಸರಕಾರ ಗ್ರಾಮೀಣ ಜನರ ಅನೂಕೂಲಕ್ಕಾಗಿ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಗ್ರಾ.ಪಂನಲ್ಲಿಯೇ ಒದಗಿಸುವ ಮಹತ್ವದ ನಿರ್ಧಾರವನ್ನು ಮಾಡಿದ್ದು, ಸರಕಾರದ ಈ ಯೋಜನೆಯ ಲಾಭವನ್ನು ಜನರು ಪಡೆದುಕೊಳ್ಳಬೇಕು. ಗ್ರಾ.ಪಂ ಸಿಬ್ಬಂದಿಗಳು ನಿಗದಿತ ಸಮಯದಲ್ಲಿ ಪ್ರಮಾಣಪತ್ರಗಳನ್ನು ಒದಗಿಸಲು ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ನಿರ್ಮಲಾ ಚಂದ್ರಶೇಖರ ತಳವಾರ, ಸದಸ್ಯರಾದ ಪದ್ಮರಾಜ್ ಪಾಟೀಲ್, ಮಂಜುನಾಥಗೌಡ ಕೆಂಚನಗೌಡ್ರು, ಸುಶೀಲವ್ವ ಮರಲಿಂಗಣ್ಣವರ, ಕರಿಯಪ್ಪಗೌಡ ಹೊಸಗೌಡ್ರು ಹಾಗೂ ಸರ್ವ ಸದಸ್ಯರು, ಗ್ರಾಮದ ಹಿರಿಯರು, ಮುಖಂಡರು, ಗ್ರಾಮಸ್ಥರು ಹಾಜರಿದ್ದರು.