ವಿಜಯಸಾಕ್ಷಿ ಮುಳಗುಂದ : ಶೋಕದ ಹಬ್ಬವಾದ ಮೊಹರಂ ಹಬ್ಬವನ್ನು ಮುಳಗುಂದ ಪಟ್ಟಣದಲ್ಲಿ ಸೌಹಾರ್ದತೆಯ ಪ್ರತೀಕವಾಗಿ ಹಿಂದೂ-ಮುಸ್ಲಿಂ ಬಾಂಧವರು ಸೇರಿ ಆಚರಿಸುತ್ತಾರೆ. ಅಲೈ ದೇವರು ಕೂಡವದಕ್ಕೂ ಮೊದಲು ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ತಾಜುದ್ದೀನ ಕಿಂಡ್ರೀ ಅವರ ನೇತೃತ್ವದಲ್ಲಿ, ಖಿದ್ಮತ್-ಎ-ಮಿಲ್ಲತ್ ಗ್ರೂಪ್‌ನ ಸಹಯೋಗದಲ್ಲಿ ಯಾದೇ ಹುಸೇನ ಅವರ ಹೆಸರಲ್ಲಿ ಶರಬತ್ ವಿತರಿಸಲಾಯಿತು.
ಈದ್ಗಾ-ಏ ಇಮಾಮ ಗುರುಗಳಾದ ಎಂ.ಎ. ಖಾಜಿ ಅವರು ಪಾತೀಹಾ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಖಿದ್ಮತ್-ಎ-ಮಿಲ್ಲತ್ ಗ್ರೂಪ್‌ನ ಅಧ್ಯಕ್ಷ ರಾಜೇಸಾಬ ಸೈಯದಬಡೆ, ಉಪಾಧ್ಯಕ್ಷ ಚಮನಸಾಬ ಹಾದಿಮನಿ, ಅಂಜುಮನ್ ಉಪಾಧ್ಯಕ್ಷ ಹಮೀದ ಮುಜಾವರ, ಕಾರ್ಯದರ್ಶಿ ಹೈದರ ಖವಾಸ, ಖಜಾಂಚಿ ಮುನ್ನಾ ಢಾಲಾಯತ, ಹಿರಿಯರಾದ ಮಹಬೂಬ ಅಲಿ ಕಲ್ಲಾನವರ, ಇಬ್ರಾಹಿಂ ಹಣಗಿ, ಮಾಬುಸಾಬ ಅಬ್ಬುನವರ, ಮಾಬುಲಿ ದುರ್ಗಿಗುಡಿ, ದಾವಲಸಾಬ ಲಕ್ಷ್ಮೇಶ್ವರ, ಮಾಬುಲಿ ಕುರ್ತಕೋಟಿ, ಜಾಫರ ಕರ್ಕಿಮುಲ್ಲಾ, ಲಾಲಷಾಪೀರ ಮಕಾನದಾರ, ನಜೀರ ಯಳವತ್ತಿ, ಜಾಫರ ಲಾಡಸಾಬನವರ, ಹುಸೇನ್ ಅಕ್ಕಿ, ದಾವೂದ್ ಜಮಾಲ್, ಹಾಗೂ ಇತರರು ಹಾಜರಿದ್ದರು.