ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: 2024-25ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದ್ದು, ಲಕ್ಷ್ಮೇಶ್ವರ ತಾಲೂಕಾ ಸರಕಾರಿ ನೌಕರರ ಸಂಘದವರು ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಗುಂಪು ಆಟಗಳಲ್ಲಿ ಖೋಖೋ ಪ್ರಥಮ, ಕಬಡ್ಡಿ ದ್ವಿತೀಯ, ವಾಲಿಬಾಲ್ ದ್ವಿತೀಯ, 4/100 ರಿಲೇ ದ್ವಿತೀಯ ಸ್ಪರ್ಧೆಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವೈಯಕ್ತಿಕ ಸ್ಪರ್ಧೆಗಳಲ್ಲಿ ಎ.ಎ.ನದಾಫ್ ಈಜು ಪ್ರಥಮ, ಶ್ರೀಕಾಂತ ನಂದೆಣ್ಣವರ 130 ಕೆಜಿ ಭಾರ ಎತ್ತುವುದು ಪ್ರಥಮ, ಫಕೀರೇಶ ಡಂಬಳ 400 ಮೀಟರ್ ಓಟ ಪ್ರಥಮ, ಆನಂದ ಮುಳಗುಂದ ಫ್ರೀ ಸ್ಟೈಲ್ ಕುಸ್ತಿ ದ್ವಿತೀಯ, ಎನ್.ಎಸ್. ಬಂಕಾಪುರ ಈಜು ದ್ವಿತೀಯ, ಸಂತೋಷ್ ರಾಥೋಡ್ ಚಕ್ರ ಎಸೆತ ಪ್ರಥಮ, ಅಜಿತ್ ಬಾಣದ ಭಾರ ಎತ್ತುವುದು ಪ್ರಥಮ, ಪ್ರವೀಣ್ ಬರಡಿ ಗುಂಡು ಎಸೆತ ಪ್ರಥಮ, ಆರ್.ಕೆ. ಹಡಪದ 200 ಮೀಟರ್ ಓಟ ದ್ವಿತೀಯ, ತೇಜಸ್ ಕರ್ಜಗಿ 800 ಮೀಟರ್ ಓಟ ಪ್ರಥಮ, ಭಾರತಿ ಚೌಡಾಪೂರ ಯೋಗ ಪ್ರಥಮ, ಕಾವೇರಿ ಸುಣಗಾರ ಚದುರಂಗ ಪ್ರಥಮ, ಎಂ.ಎಂ. ಶಿವಶಿಂಪಿ 200 ಮೀಟರ್ ಬಟರ್‌ಫ್ಲೈ ದ್ವಿತೀಯ, ರಮೇಶ್ ಹೊಂಬಳ ಉದ್ದ ಜಿಗಿತ ಪ್ರಥಮ, ಜಿ.ಪಿ. ನಾವಿ 50 ಮೀಟರ್ ಸ್ವಿಮ್ಮಿಂಗ್ ದ್ವಿತೀಯ ಸ್ಥಾನ ಪಡೆದು ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಸಂಘದ ಸದಸ್ಯರ ಸಾಧನೆಗೆ ತಾಲೂಕಿನ ನೌಕರರ ಸಂಘದ ಅಧ್ಯಕ್ಷ ಗುರುರಾಜ್ ಹವಳದ ಹಾಗೂ ನಿಕಟಪೂರ್ವ ಅಧ್ಯಕ್ಷ ಡಿ.ಎಚ್. ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ. ಕ್ರೀಡಾಕೂಟದಲ್ಲಿ ಸಂಘದ ಕಾರ್ಯದರ್ಶಿ ಎಂ.ಎ. ನದಾಫ್, ಎಂ.ಡಿ. ವಾರದ, ಎ.ಬಿ. ಗೌಡರ, ಆನಂದ್ ಕರ್ಜಗಿ, ಎ.ಎಂ. ಅಕ್ಕಿ, ಬಿ.ಎಂ. ಯರಗುಪ್ಪಿ, ಗಿರೀಶ್ ಕುಂಬಾರ, ಬಿ.ಎಸ್. ಹರಲಾಪೂರ, ಚಂದ್ರು ನೇಕಾರ, ಬಿ.ಬಿ. ಯತ್ತಿನಹಳ್ಳಿ, ಡಿ.ಡಿ. ಲಮಾಣಿ, ಎಂ.ಎಸ್. ಹಿರೇಮಠ ಮುಂತಾದವರು ಭಾಗವಹಿಸಿದ್ದರು.