ಚಳಿಗಾಲದಲ್ಲಿ ಪಾಲಕ್ ಸೊಪ್ಪು ತಿನ್ನೋದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

0
Spread the love

ಪರ್ಷಿಯಾದಲ್ಲಿ ಉದ್ಭವಿಸಿದ ಎಂದು ಹೇಳಲಾಗುವ ಪಾಲಕ್‌ ಸೊಪ್ಪು ಇಂದು ವಿಶ್ವದ ಅನೇಕ ಭಾಗಗಳಲ್ಲಿ ಪ್ರಮುಖ ಹಸಿರು ತರಕಾರಿಯಾಗಿ ಬಳಕೆಯಲ್ಲಿದೆ. ಕಾರ್ಬೋಹೈಡ್ರೇಟ್‌ಗಳು ಮತ್ತು ನಾರಿನಂಶದಲ್ಲಿ ಸಮೃದ್ಧವಾಗಿರುವ ಪಾಲಕ್‌ ದೇಹದ ಆರೋಗ್ಯ ಕಾಪಾಡಲು ಮಹತ್ವದ ಪಾತ್ರವಹಿಸುತ್ತದೆ. ವಿಶೇಷವಾಗಿ ಕರಗದ ನಾರಿನಂಶ ಹೆಚ್ಚು ಇರುವುದರಿಂದ ಮಲಬದ್ಧತೆ ತಡೆಯಲು ಇದು ಪರಿಣಾಮಕಾರಿ ಆಹಾರವಾಗುತ್ತದೆ.

Advertisement

ಪಾಲಕ್‌ ಸೊಪ್ಪು ಅನೇಕ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವೆಂದು ಪೋಷಣಾಶಾಸ್ತ್ರಜ್ಞರು ಹೇಳಿದ್ದಾರೆ. ಇದರಲ್ಲಿ ವಿಟಮಿನ್ A, ವಿಟಮಿನ್ C, ವಿಟಮಿನ್ K1, ಫೋಲಿಕ್ ಆಮ್ಲ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೇಶಿಯಂ ಹೆಚ್ಚಾಗಿ ಲಭ್ಯ. ಈ ಎಲ್ಲ ಪೋಷಕಾಂಶಗಳು ದೇಹದ ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುವುದಲ್ಲದೆ, ಅಸ್ಥಿ ಮತ್ತು ರಕ್ತದ ಆರೋಗ್ಯಕ್ಕೂ ಸಹಾಯಕವಾಗಿವೆ.

1. ಪಾಲಕ್ ಸೊಪ್ಪು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಪಾಲಕ್ ಸೊಪ್ಪಲ್ಲಿ ಕೆಲವು ತರಕಾರಿಗಳಲ್ಲಿ ಬಣ್ಣಕ್ಕೆ ಕಾರಣವಾಗಿರುವ ಕ್ಯಾರೊಟಿನಾಯ್ಡ್‌ಗಳಾದ ಝೀಕ್ಸಾಂಥಿನ್ ಮತ್ತು ಲುಟೀನ್‌ಗಳು ಹೆಚ್ಚಾಗಿವೆ. ಮನುಷ್ಯನ ಕಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಈ ವರ್ಣದ್ರವ್ಯಗಳನ್ನು ಹೊಂದಿರುತ್ತವೆ. ಇದು ಸೂರ್ಯನ ಬೆಳಕಿನಿಂದ ಉಂಟಾಗುವ ಹಾನಿಯಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ.

2. ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಪಾಲಕ್‌ನಲ್ಲಿ MGDG ಮತ್ತು SQDG ಎಂಬ ಎರಡು ಘಟಕಗಳಿವೆ. ಇದು ಕ್ಯಾನ್ಸರ್ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.

3. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಪಾಲಕವು ಹೆಚ್ಚಿನ ಪ್ರಮಾಣದ ನೈಟ್ರೇಟ್‌ಗಳನ್ನು ಹೊಂದಿರುತ್ತದೆ. ಇದು ರಕ್ತದೊತ್ತಡದ ಮಟ್ಟವನ್ನು ಮಧ್ಯಮಗೊಳಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

4. ಕಿಡ್ನಿ ಸ್ಟೋನ್​ನಿಂದ ಬಳಲುತ್ತಿರುವವರಿಗೆ ಪಾಲಕ್ ಸೊಪ್ಪು ಅತ್ಯುತ್ತಮ ತರಕಾರಿ. ಕಿಡ್ನಿಯಲ್ಲಿ ಆಮ್ಲ ಮತ್ತು ಖನಿಜ ಲವಣಗಳ ಸಂಗ್ರಹದಿಂದ ಕಲ್ಲುಗಳು ಉಂಟಾಗುತ್ತವೆ. ಪಾಲಕ್ ಸೊಪ್ಪುಗಳಲ್ಲಿ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಅಧಿಕವಾಗಿದೆ.

5. ರಕ್ತ ಹೆಪ್ಪುಗಟ್ಟುವಿಕೆಗೆ ಸಹಕಾರಿಯಾಗಿದೆ. ಪಾಲಕ್ ವಿಟಮಿನ್ K1 ಅಂಶವನ್ನು ಹೊಂದಿದೆ. ಇದು ನಮ್ಮ ದೇಹದಲ್ಲಿ ಹಲವಾರು ಕಾರ್ಯಗಳನ್ನು ನಿರ್ವಹಿಸುತ್ತದೆ. ಮುಖ್ಯವಾಗಿ ರಕ್ತ ಹೆಪ್ಪುಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

6. ಉತ್ತಮ ಮೂಳೆಗಳ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ ಇದೆ. ಅದು ಉತ್ತಮ ಮೂಳೆಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ, ನಿಮ್ಮ ದೇಹದಿಂದ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ.

7. ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಪಾಲಕ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದರ ಹೆಚ್ಚಿನ ಪ್ರಮಾಣದ ಫೈಬರ್ ಅಂಶವು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.


Spread the love

LEAVE A REPLY

Please enter your comment!
Please enter your name here