ಜೇನುತುಪ್ಪ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮುಖದ ಸೌಂದರ್ಯದಿಂದ ಹಿಡಿದು ತೂಕ ಇಳಿಕೆಗೂ ಜೇನುತುಪ್ಪ ಸಹಕಾರಿಯಾಗಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಜೇನುತುಪ್ಪದಲ್ಲಿ ಕಲಬೆರಕೆಯನ್ನು ಕಾಣಬಹುದಾಗಿದ್ದು, ಹೀಗಾಗಿ ಅಸಲಿ ಮತ್ತು ನಕಲಿಯೇ ಎಂದು ಗುರುತಿಸಲು ತುಂಬಾನೇ ಕಷ್ಟ. ಹಾಗಾದ್ರೆ ನೀವು ಖರೀದಿಸಿರುವ ಜೇನುತುಪ್ಪ ಶುದ್ಧವಾಗಿದೆಯೇ ಎಂದು ಮನೆಯಲ್ಲೇ ಪತ್ತೆಹಚ್ಚಲು ಈ ವಿಧಾನವನ್ನು ಅನುಸರಿಸಿ.
ಕೇವಲ ಒಂದು ಲೋಟ ನೀರು, ಒಂದು ಚಮಚ ಬೆಂಕಿಕಡ್ಡಿ ಮತ್ತು ಮರಳಿನಿಂದ ಜೇನುತುಪ್ಪ ಶುದ್ಧವಾಗಿದೆಯೇ ಎಂದು ಕಂಡು ಹಿಡಿಯಬಹುದು. ನೀವು ಕೇವಲ ಒಂದು ಲೋಟ ನೀರು, ಒಂದು ಚಮಚ, ಬೆಂಕಿಕಡ್ಡಿ ಮತ್ತು ಮರಳಿನಿಂದ ಶುದ್ಧ ಜೇನುತುಪ್ಪವನ್ನು ಕಂಡುಹಿಡಿಯಬಹುದು. ಒಂದು ಗಾಜಿನ ಲೋಟದಲ್ಲಿ ಬಿಸಿನೀರನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ಜೇನುತುಪ್ಪವು ನೀರಿನಲ್ಲಿ ತಕ್ಷಣ ಕರಗಿದರೆ, ಅದು ಕಲಬೆರಕೆ ಎಂದರ್ಥ. ಜೇನು ದಪ್ಪವಾದ ಎಳೆಯನ್ನು ಮಾಡಿ ಕೆಳಭಾಗದಲ್ಲಿ ಸೇರಿಕೊಂಡರೆ ಅದು ಶುದ್ಧ ಜೇನುತುಪ್ಪ.
ಪರಿಶುದ್ಧವಾಗಿರುವಂತಹ ಜೇನುತುಪ್ಪವನ್ನು ನೀವು ಯಾವುದೇ ಶಾಖ ಅಥವಾ ಬೆಂಕಿಗೆ ಹಾಕಿದ ವೇಳೆ ಅದು ಸುಡುವುದಿಲ್ಲ. ಈ ಪರೀಕ್ಷೆ ಮಾಡಲು ಒಂದು ಬೆಂಕಿ ಕಡ್ಡಿ ಅಥವಾ ಕಾಟನ್ ಬಡ್ ತೆಗೆದುಕೊಳ್ಳಿ, ಅದನ್ನು ಜೇನುತುಪ್ಪದಲ್ಲಿ ಬೆರೆಸಿಕೊಳ್ಳಿ ಮತ್ತು ಅದಕ್ಕೆ ಬೆಂಕಿ ಹಚ್ಚಿ. ಜೇನುತುಪ್ಪವು ಪರಿಶುದ್ಧವಾಗಿದ್ದರೆ ಆಗ ಅದು ಸುಟ್ಟರೆ ಆಗ ಜೇನುತುಪ್ಪವು ಪರಿಶುದ್ಧವಾಗಿದೆ ಎಂದು ಹೇಳಬಹುದು.
ನೀವು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪವನ್ನು ಸೇರಿಸಿ, ಮಿಶ್ರಣ ಮಾಡಿ. ಪರಿಶುದ್ಧವಾಗಿ ಇರುವಂತಹ ಜೇನುತುಪ್ಪವು ನೀರಿನಲ್ಲಿ ಸಂಪೂರ್ಣವಾಗಿ ಕರಗಿ ಹೋಗುವುದಿಲ್ಲ. ಒಂದು ಸಲ ನೀರಿಗೆ ಹಾಕಿದ ಬಳಿಕ ಅದು ಕರಗಲು ಸ್ವಲ್ಪ ಸಮಯ ಬೇಕಾಗುವುದು. ಜೇನುತುಪ್ಪಕ್ಕೆ ಗ್ಲೂಕೋಸ್ ಅಥವಾ ಸಕ್ಕರೆ ಹಾಕಿದ್ದರೆ ಆಗ ಅದು ನೀರಿನಲ್ಲಿ ಬಿಳಿ ಬಣ್ಣವನ್ನು ಬಿಡುವುದು.
ಚಲಿಸಿದಾಗ ಅದು ಜೇನುಗೂಡು ಮಾದರಿಯನ್ನು ರೂಪಿಸುತ್ತದೆ ಎಂದು ನೀವು ಗಮನಿಸಬಹುದು. ಲಘು ಜೇನುತುಪ್ಪವನ್ನು ಕೈಯಲ್ಲಿ ತೆಗೆದುಕೊಂಡು ಅದರಲ್ಲಿ ಮರಳನ್ನು ಬೆರೆಸಿ ತಿರುಗಿಸಿ. ಜೇನು ಕೈಗೆ ಮರಳು ಅಂಟಿಕೊಳ್ಳದೆ ಚಲಿಸಲು ಪ್ರಾರಂಭಿಸಿದರೆ, ಅದು ಶುದ್ಧವಾಗಿರುತ್ತದೆ. ಮರಳಿನೊಂದಿಗೆ ಜೇನುತುಪ್ಪವನ್ನು ಬೆರೆಸಿ ಅದು ನಿಮ್ಮ ಕೈಗೆ ಅಂಟಿಕೊಂಡರೆ ಅದು ಕಲಬೆರಕೆ ಜೇನುತುಪ್ಪ ಎಂದರ್ಥ.



