ಕೇಸರಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯೋದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ..?

0
Spread the love

ಕೇಸರಿಯು ನಿಜವಾಗಿಯೂ ಚಿನ್ನದಂತಹ ಔಷಧೀಯ ಗುಣಗಳನ್ನು ಹೊಂದಿದೆ. ಬಣ್ಣ, ರುಚಿ ಮತ್ತು ವಾಸನೆಯೊಂದಿಗೆ ಅಪರೂಪದ ಮಸಾಲೆಯಾಗಿದ್ದು, ಹಾಗಾಗಿ ಇದು ಎಲ್ಲರ ನೆಚ್ಚಿನ ಕೆಂಪು ಚಿನ್ನವೇ ಸರಿ. ಹಾಲಿನಲ್ಲಿ ಕೇಸರಿ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..? ಇಲ್ಲಿದೆ ನೋಡಿ ಮಾಹಿತಿ

Advertisement

ಕೇಸರಿ ಹಾಲಿನ ಸೇವನೆಯಿಂದ ಲಿವರ್ ಆರೋಗ್ಯವಾಗಿರುವುದು ಮಾತ್ರವಲ್ಲದೆ ಅಸ್ತಮಾ, ಸಂಧಿವಾತ ಸಮಸ್ಯೆ, ದೃಷ್ಟಿ ಸಮಸ್ಯೆ, ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆ, ನಿದ್ರಾಹೀನತೆ ಸಮಸ್ಯೆ ಇತ್ಯಾದಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಒಂದು ದಳ ಕೇಸರಿಯನ್ನು ಹಾಲಿನಲ್ಲಿ ಸೇರಿಸುವುದರಿಂದ ಅದು ನಿಮ್ಮ ಹೃದಯಕ್ಕೆ ಅದ್ಭುತವಾಗಿರುತ್ತದೆ. ’ಗುಣಕಾರಕ ಆಹಾರಗಳು’ ಎನ್ನುವ ಪುಸ್ತಕದ ಪ್ರಕಾರ ಇದು ರಕ್ತ ಪರಿಚಲನೆಯನ್ನು ಪ್ರಚೋದಿಸುತ್ತದೆ, ರಕ್ತನಾಳಗಳು ಗಟ್ಟಿಯಾಗುವುದನ್ನು ತಡೆಯುತ್ತದೆ. ಇದು ಕ್ರೊಸೆಟಿನ್ ಎನ್ನುವ ಸಕ್ರಿಯ ಸಂಯುಕ್ತ ಪದಾರ್ಥವನ್ನು ಹೊಂದಿದ್ದು, ಇದು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯ ಸಂಬಂಧಿ ರೋಗಗಳನ್ನು ತಡೆಗಟ್ಟಲು ನೆರವಾಗುತ್ತದೆ.

ನೀವು ಪ್ರತಿದಿನ ಕೇಸರಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ನಿಮ್ಮ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಕೇಸರಿ ಅತ್ಯುತ್ತಮವಾದ ನೆನಪಿನ ಶಕ್ತಿ ಪ್ರಚೋದಕವಾಗಿದೆ. ಅಧ್ಯಯನವೊಂದರ ಪ್ರಕಾರ ಇದು ಆಲ್ಜೀಮರ್ಸ್ ರೋಗದ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ತಡೆಗಟ್ಟಲು ಪ್ರಾಕೃತಿಕ ಪರಿಹಾರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಕೇಸರಿ ಹಿಪ್ಪೋಕ್ಯಾಂಪಸ್ ನಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ತಡೆಯುವ ಮೂಲಕ, ನೆನಪಿನ ಶಕ್ತಿ ಹೆಚ್ಚಿಸುತ್ತದೆ.

ಕೇಸರಿ ಹಾಲು ಜ್ವರ ಮತ್ತು ನೆಗಡಿಯನ್ನು ಗುಣಪಡಿಸಲು ಪರಿಣಾಮಕಾರಿ ಪೇಯವಾಗಿದೆ. ಆರೋಗ್ಯ ತಜ್ಞರ ಪ್ರಕಾರ, ನಾವು ಹಣೆಯ ಮೇಲೆ ಕೇಸರಿ ಬೆರೆಸಿದ ಹಾಲನ್ನು ಹಚ್ಚುವುದರಿಂದ ಶೀಘ್ರವಾಗಿ ನೆಗಡಿಯಿಂದ ಉಪಶಮನ ದೊರೆಯುತ್ತದೆ. ಕೇಸರಿ ಹಾಲು ಅನೇಕ ಗುಣಕಾರಕ ಲಕ್ಷಣಗಳನ್ನು ಹೊಂದಿದ್ದು, ಇದು ನೆಗಡಿ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಕೇಸರಿ ಹಾಲು ಸರಿಯಾಗಿ ನಿದ್ರಿಸಲು ಕಷ್ಟಪಡುವ ವ್ಯಕ್ತಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ಸ್ಯಾಫ್ರನಾಲ್, ಪೈಕ್ರೋಕ್ರೋಸಿನ್ ಮತ್ತು ಕ್ರೋಸಿನ್ ನಂತಹ ಸಂಭಾವ್ಯ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುವುದರಿಂದ ನಿಮ್ಮ ಆರೋಗ್ಯ ಸಮಸ್ಯೆಗಳನ್ನು ದೂರದಲ್ಲಿಡುತ್ತದೆ. ಕೇಸರಿ ಬೆರೆಸಿದ ಹಾಲು ಅಥವಾ ಟೀ ನಿದ್ರಾಹೀನತೆಯನ್ನು ಗುಣಪಡಿಸಿ, ಖಿನ್ನತೆಗೂ ಉಪಶಮನ ನೀಡುತ್ತದೆ. ಈ ಮಸಾಲೆ ಮ್ಯಾಂಗನೀಸ್ ಅನ್ನು ಸಮೃದ್ಧವಾಗಿ ಹೊಂದಿದ್ದು, ಇದು ನಿದ್ರೆಯನ್ನು ಪ್ರಚೋದಿಸಲು ಅಲ್ಪ ಮಂಪರುಕಾರಕ ಗುಣವನ್ನು ಹೊಂದಿದೆ.

ಒಂದು ಲೋಟ ಕೇಸರಿ ಹಾಲು ಕೀಲು ನೋವು, ಅಸ್ತಮಾ ಮತ್ತು ಕೆಲವು ಅಲ್ಪಪ್ರಮಾಣದ ಹವಾಮಾನ ಸಂಬಂಧಿತ ಅಲರ್ಜಿಗಳನ್ನು ಉಪಶಮನ ಮಾಡುತ್ತದೆ. ಆದ್ದರಿಂದ ನಿಯಮಿತವಾಗಿ ಕೇಸರಿ ಹಾಲು ಸೇವಿಸುವವರು ಕೀಲುನೋವು, ಅಸ್ತಮಾ ಮತ್ತು ಅಲ್ಪ ಪ್ರಮಾಣದ ಅಲರ್ಜಿಗಳಿಗೆ ಒಳಗಾಗುವುದಿಲ್ಲ.


Spread the love

LEAVE A REPLY

Please enter your comment!
Please enter your name here