ಮನುಷ್ಯನಿಗೆ ಮಾದರಿಯಾದ ಶ್ವಾನ: ಮತ್ತೊಂದು ನಾಯಿಯ ಪ್ರಾಣ ಉಳಿಸಲು ರಕ್ತದಾನ ಮಾಡಿದ ಶ್ವಾನ

0
Spread the love

ಕೊಪ್ಪಳ: ಇಂದಿನ ಕಾಲದಲ್ಲಿ ಮನುಷ್ಯ ಮನುಷ್ಯನಿಗೆ ರಕ್ತದಾನ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಇಲ್ಲೊಂದು ಮೂಕ ಪ್ರಾಣಿ ಇನ್ನೊಂದು ಪ್ರಾಣಿಗೆ ರಕ್ತ ನೀಡಿ ಮಾನವೀಯತೆ ಮೆರೆದಿದೆ. ಹೌದು ಕೊಪ್ಪಳದಲ್ಲಿ ನಾಯಿ ಪ್ರಾಣವನ್ನು ಉಳಿಸುವುದಕ್ಕಾಗಿ ಮತ್ತೊಂದು ನಾಯಿ ರಕ್ತದಾನ ಮಾಡಿದ ಘಟನೆ ನಡೆದಿದೆ.

Advertisement

ಅನಾರೋಗ್ಯದಿಂದ ಹಿಮೋಗ್ಲೊಬಿನ್ ಶಕ್ತಿ ಮೂರಕ್ಕೆ ತಲುಪಿದ್ದ ನಗರದ ಒಂಭತ್ತು ವಷ೯ದ ಲ್ಯಾಬರ್ ಡಾಗ್ ನಾಯಿಗೆ ರಕ್ತದ ಅತ್ಯವಶ್ಯಕತೆ ಇತ್ತು. ಇದನ್ನು ಅರಿತ ವೈದ್ಯರುಗಳು ನಗರದ ಮೂರು ನಾಯಿಗಳ ವಿಳಾಸಗಳನ್ನು ಸಂಪಕಿ೯ಸಿ ಕರೆಸಿ ಅವುಗಳ ರಕ್ತದ ಶಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಿದರು.

ನಗರದ ನಿವಾಸಿ ಪ್ರಾಧ್ಯಾಪಕ ಬಸವರಾಜ ಪೂಜಾರ್ ರವರ ಸಾಕು ನಾಯಿ ಮೂರು ವಷ೯ದ ಭೈರವ(ಡಾಬರ್ ಮ್ಯಾನ್)ನ ರಕ್ತ  ಮ್ಯಾಚ್ ಆಗಿದೆ.   ಮೂರು ನಾಯಿಗಳ ಶಾಂಪಲ್ ಗಳಲ್ಲಿ  ಪೂಜಾರ್ ರವರ 3 ವಷ೯ದ ಡಾಬರ್ ಮ್ಯಾನ್ ತಳಿಯ ರಕ್ತವು ಹೊಂದಿಕೆಯಾಗಿದ್ದು ವೈದ್ಯಕೀಯ ನಿಯಮಾನುಸಾರ ಇದರ 300 ml ರಕ್ತವನ್ನು ಪರೀಕ್ಷಿಸಿದ,

ಕುತ್ತಿಗೆಯ ಭಾಗದಿಂದ 12 ನಿಮಿಷಗಳಲ್ಲಿ ಪಡೆದು ದೈಹಿಕವಾಗಿ ನಿತ್ರಾಣವಾಗಿದ್ದ ಲ್ಯಾಬರ್ ಡಾಗ್ ಗೆ ನೀಡಲಾಗಿದೆ. ಇಲ್ಲಿ ನಾಯಿಯೊಂದು ತನ್ನ ರಕ್ತದಾನವನ್ನು ಮಾಡಿ ಮನುಷ್ಯರಿಗೇ ಮಾದರಿಯಾಗಿದೆ. ಇಷ್ಟು ದಿನ ನಿಯತ್ತಿಗೆ ಮಾತ್ರ ನಾಯಿ ಹೆಸರೇಳುತ್ತಿದ್ದವರು, ರಕ್ತದಾನ ಬಗ್ಗೆಯೂ ಮಾತನಾಡಬಹುದು. ಇನ್ನೂ ಈ ಘಟನೆ ಮಾನವೀಯತೆ ಕೆಲಸಕ್ಕೆ ಸಾಕ್ಷಿಯಾಗಿರುವುದು ವಿಶೇಷವಾಗಿದೆ.

 


Spread the love

LEAVE A REPLY

Please enter your comment!
Please enter your name here