ವಿಜಯಸಾಕ್ಷಿ ಸುದ್ದಿ, ನರೇಗಲ್ : ಎಲ್ಲಿಯೇ ಧರ್ಮದ ಕಾರ್ಯಗಳು ನಡೆದರೂ ಅದಕ್ಕೆ ಪ್ರೋತ್ಸಾಹ ನೀಡಲು ಧರ್ಮಸ್ಥಳವು ಎಂದಿಗೂ ಮುಂದಿರುತ್ತದೆ. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಇಂತಹ ಕಾರ್ಯಗಳನ್ನು ಸದಾ ಪ್ರೋತ್ಸಾಹಿಸುತ್ತ ಬಂದಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕಾ ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ ಹೇಳಿದರು.
ಪಟ್ಟಣದಲ್ಲಿ ಈಚೆಗೆ ನೂತನವಾಗಿ ನಿರ್ಮಾಣಗೊಂಡ ಶ್ರೀ ನಗರೇಶ್ವರ ದೇವಸ್ಥಾನಕ್ಕೆ 1.5 ಲಕ್ಷ ರೂ.ಗಳ ದೇಣಿಗೆಯನ್ನು ಸಮರ್ಪಿಸಿ ಅವರು ಮಾತನಾಡಿದರು.
ನಿಮ್ಮ ಕಾರ್ಯಗಳಿಗೆ ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಆಶೀರ್ವಾದ ಯಾವಗಲೂ ಇದೆ ಎಂದು ತಿಳಿಸಿದರಲ್ಲದೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಡಿ ಕೈಗೊಂಡ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಅಧ್ಯಕ್ಷ ರಾಮಚಂದ್ರಪ್ಪ ನವಲಿ ಮಾತನಾಡಿ, ನಮ್ಮ ಸಮಾಜದ ಬಗ್ಗೆ ಅಭಿಮಾನ ವ್ಯಕ್ತಪಡಿಸಿ, ಆಶೀರ್ವಾದ ಮಾಡಿರುವ ಡಾ. ವೀರೇಂದ್ರ ಹೆಗ್ಗಡೆಯವರ ಕಾರ್ಯವನ್ನು ನಮ್ಮ ಸಮಾಜವೆಂದಿಗೂ ಮರೆಯದು. ಅವರ ಆಶಯದಂತೆ ಈ ಹಣವನ್ನು ದೇವಸ್ಥಾದ ಅಭಿವೃದ್ಧಿಗಾಗಿ ಬಳಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಚಂದ್ರಹಾಸ ಇಲ್ಲೂರ, ಸದಸ್ಯರಾದ ಸುರೇಶ ನವಲಿ, ರಾಮಚಂದ್ರ ಬೆಟದೂರ, ಸಂಜೀವ ಬಿಜಾಪೂರ, ನಾಗೇಶ ಗುಡಿಸಾಗರ, ಕೃಷಿ ಅಧಿಕಾರಿ ಶಂಭುಲಿಂಗ, ವಲಯ ಸೇವಾ ಪ್ರತಿನಿಧಿ ಸುಮಲತಾ, ಪುಷ್ಪಲತಾ, ವಿಜಯಲಕ್ಷ್ಮಿ, ಅಶ್ವಿನಿ ಇತರರಿದ್ದರು.