HomeEducationಶಾಲಾ ಮಕ್ಕಳಿಗೆ ಸ್ಟೀಲ್ ಲೋಟ ದೇಣಿಗೆ

ಶಾಲಾ ಮಕ್ಕಳಿಗೆ ಸ್ಟೀಲ್ ಲೋಟ ದೇಣಿಗೆ

Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಕರ್ನಾಟಕ ಸರಕಾರದ ಶಾಲಾ ಮಕ್ಕಳಿಗೆ ಮಹತ್ವಪೂರ್ಣ ಕ್ಷೀರಭಾಗ್ಯ ಯೋಜನೆಯು ಜಾರಿಯಲ್ಲಿದ್ದು, ಮುಳಗುಂದ ಪಟ್ಟಣದ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಹಾಲು ಕುಡಿಯಲು ಸ್ಟೀಲ್ ಲೋಟಗಳನ್ನುಪಟ್ಟಣದ ನದಾಫ ಓಣಿ ಜಮಾತಿನ ಹಿರಿಯರಾದ ಚಮನಸಾಬ ಹಾದಿಮನಿಯವರು ದೇಣಿಗೆಯಾಗಿ ನೀಡದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡವರ ಮಕ್ಕಳು ಸರಕಾರಿ ಶಾಲೆಗೆ ಹೆಚ್ಚು ಬರುವುದರಿಂದ ಸೌಲಭ್ಯಗಳ ಕೊರತೆ ಇದ್ದರೆ ಮಕ್ಕಳು ಪಾಠದಲ್ಲಿ ಹಿಂದುಳಿಯುತ್ತಾರೆ. ಹೀಗಾಗಿ, ಸರಕಾರದ ಯೋಜನೆಗಳಿಗೆ ಉಳ್ಳವರು ಕೈ ಜೋಡಿಸಿದರೆ ಮಕ್ಕಳಿಗೆ ಪೂರಕ ವಾತಾವರಣ ಸಿಗುತ್ತದೆ ಎಂದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಲಾಲಷಾಪೀರ ಮಕಾನದಾರ, ದುರ್ಗಿಗುಡಿ, ಮಕ್ತುಂಸಾಬ, ಇಸ್ಮಾಯಿಲ್ ದೊಡ್ಡಮನಿ, ಫಕ್ರುಸಾಬ ಹಾದಿಮನಿ, ಖಿದ್ಮತ್-ಎ-ಮಿಲ್ಲತ್ ಗ್ರೂಪ್‌ನ ಸದಸ್ಯರಾದ ತಾಜುದ್ದೀನ ಕಿಂಡ್ರೀ, ಹಮೀದ ಮುಜಾವರ, ಇಸ್ಮಾಯಿಲ್ ಖಾಜಿ, ರಾಜೇಸಾಬ ಸೈಯದಬಡೆ, ಮುನ್ನಾ ಡಾಲಾಯತ, ಮೆಹಬೂಬ ಕುರ್ತಕೋಟಿ, ದಾವಲಸಾಬ ಲಕ್ಷ್ಮೇಶ್ವರ, ದಾವೂದ್ ಜಮಾಲ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!