ವಿಜಯಸಾಕ್ಷಿ ಸುದ್ದಿ, ಗದಗ: ರೋಟರಿ ಕ್ಲಬ್ ಗದಗ-ಬೆಟಗೇರಿ ವೆಲ್‌ಫೇರ್ ಸೊಸೈಟಿಯ ಅಡಿಯಲ್ಲಿ ನಡೆಯುವ ರೋಟರಿ ಉಚಿತ ಕಣ್ಣಿನ ಆಸ್ಪತ್ರೆಗೆ ಇಂದುಮತಿ ಬ್ಯಾಲಹುಣಸಿಯವರು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದರು.
ರೋಟರಿ ಕ್ಲಬ್ ಗದಗ-ಬೆಟಗೇರಿ ವೆಲ್‌ಫೇರ್ ಸೊಸೈಟಿ ಹಾಗೂ ರೋಟರಿ ಕ್ಲಬ್ ಗದಗ-ಬೆಟಗೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ 200ನೇ ನೇತ್ರ ಶಸ್ತç ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಪ್ಪಳದ ನಿವೃತ್ತ ಶಿಕ್ಷಕಿ ಇಂದುಮತಿ ಬ್ಯಾಲಹುಣಸಿಯವರು ಸಂಸ್ಥೆಯ ಕಾರ್ಯಕ್ರಮವನ್ನು ಮೆಚ್ಚಿ ಸಂಸ್ಥೆಗೆ ಅವರ ತಾಯಿ ದಿ. ಶ್ರೀಮತಿ ನೀಲಮ್ಮ ನಾಗಪ್ಪ ಬ್ಯಾಲಹುಣಸಿ ಹಾಗೂ ತಂದೆ ದಿ. ನಾಗಪ್ಪ ನಿಂಗಪ್ಪ ಬ್ಯಾಲಹುಣಸಿ ಇವರ ಸ್ಮರಣಾರ್ಥ ಸಂಸ್ಥೆಯು ನಡೆಸುವ ನಿರಂತರ ನೇತ್ರ ಚಿಕಿತ್ಸಾ ಶಿಬಿರಕ್ಕೆ ಸಹಾಯವಾಗುವಂತೆ ಒಂದು ಲಕ್ಷ ರೂಪಾಯಿಗಳನ್ನು ನೀಡಿದರು.
ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಪೂಜ್ಯ ಮನ್ನಿರಂಜನ ಜಗದ್ಗುರು ಶ್ರೀ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಇಂದುಮತಿ ಬ್ಯಾಲಹುಣಸಿಯವರು ರೋಟರಿ ಸಂಸ್ಥೆಗೆ ನೀಡಿದ ದಾನವು ಶ್ಲಾಘನೀಯವಾಗಿದ್ದು, ಅವರ ಈ ಕಾರ್ಯ ಪ್ರಸಂಶನೀಯವೆಂದು ಆಶೀರ್ವದಿಸಿದರು.
ರೋಟರಿ ಕ್ಲಬ್ ಗದಗ-ಬೆಟಗೇರಿ ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷರಾದ ಶ್ರೀಧರ ಸುಲ್ತಾನಪೂರ, ನೀಲಮ್ಮ ಪ್ರಭಣ್ಣ ಹುಣಶಿಕಟ್ಟಿ, ಪ್ರಭಣ್ಣ ಹುಣಶಿಕಟ್ಟಿ, ರೋಟರಿ ಸಂಸ್ಥೆಯ ಅಧ್ಯಕ್ಷ ರೊ. ಆರ್.ಬಿ. ಉಪ್ಪಿನ, ಕಾರ್ಯದರ್ಶಿ ರೊ. ಸಂತೋಷ ಅಕ್ಕಿ, ಅಸಿಸ್ಟಂಟ್ ಗವರ್ನರ್ ಶಿವಾಚಾರ್ಯ ಎಸ್.ಹೊಸಳ್ಳಿಮಠ ರೊ. ಡಾ. ಶೇಖರ ಡಿ.ಸಜ್ಜನರ, ಖಜಾಂಚಿ ರೊ. ಚನ್ನವೀರಪ್ಪ ಹುಣಶಿಕಟ್ಟಿ, ಡಾ. ಮಂಜುನಾಥ ಬ್ಯಾಲಹುಣಸಿ ಮುಂತಾದವರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ರೊ. ಬಾಲಕೃಷ್ಣ ಕಾಮತ ವಂದಿಸಿರು.