ಭಾರತಕ್ಕೆ ದ್ರೋಹಿಗಳಾಗಬೇಡಿ: ನಟ ಧ್ರುವ ಸರ್ಜಾ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

0
Spread the love

ಬೆಂಗಳೂರು:– ಕಳೆದ ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಭಾರತೀಯರು ಬಲಿಯಾಗಿದ್ದರು. ಹೀಗಾಗಿ ಪಾಕ್-ಭಾರತದ ಸಂಬಂಧದ ಕೊಂಡಿ ಕಳಚಿತ್ತು. ಅಲ್ಲದೇ ಪಾಕ್ ಮೇಲೆ ಭಾರತ ಹಲವು ಕಠಿಣ ಕ್ರಮ ಕೈಗೊಂಡಿತ್ತು. ಅದರಂತೆ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸುತ್ತಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಭಾರತ ದೇಶದಲ್ಲಿರುವ ಹಿತಶತ್ರುಗಳಿಗೆ ನಟ ಎಚ್ಚರಿಕೆ ನೀಡಿದ್ದಾರೆ.

Advertisement

ಭಾರತದಲ್ಲಿ ವಾಸಿಸುವ ಪಾಕಿಸ್ತಾನಿಗರೇ, ನೀವು ಉಗ್ರರ ಬಗ್ಗೆ ಕರುಣೆ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರೇ ಆಗುತ್ತೀರಿ. ಭಾರತಕ್ಕೆ ದ್ರೋಹಿಗಳಾಗಬೇಡಿ. ಭಾರತದಲ್ಲಿರುವವರು ಮೊದಲು ಭಾರತವನ್ನು ನಂಬಿ, ನೀವು ವಾಸಿಸುವ ದೇಶವನ್ನು ಪ್ರೀತಿಸಿ ಎಂದು ನಟ ತಿಳಿಸಿದ್ದಾರೆ. ಇಲ್ಲದಿದ್ದರೆ ಶೀಘ್ರದಲ್ಲೇ ನಾವು ನಿಮ್ಮನ್ನು ಭಾರತದಿಂದ ಹೊರಹಾಕುತ್ತೇವೆ ಎಂದು ಧ್ರುವ ಸರ್ಜಾ ಎಚ್ಚರಿಕೆ ನೀಡಿದ್ದಾರೆ. ಜೈ ಹಿಂದ್, ಜೈ ಶ್ರೀರಾಮ್, ಜೈ ಹನುಮಾನ್ ಎಂದು ಬರೆದುಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here