ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ವಿರುದ್ಧ ಬಂದಿರುವ ಆರೋಪ ಸುಳ್ಳು ಎಂಬುದು ಮುಂದೊಂದು ದಿನ ಸಾಬೀತಾಗುತ್ತದೆ. ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಪತ್ನಿ ಹೆಸರು ಎಳೆದುತರಬೇಡಿ ಎಂದು ಆಗ್ರಹಿಸಿದ್ದಾರೆ.
ರಾಜ್ ಕುಂದ್ರಾ ಮನೆ ಹಾಗೂ ಆಫೀಸ್ಗಳ ಮೇಲೆ ನಿನ್ನೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಈ ಹಿಂದೆ ರಾಜ್ ಕುಂದ್ರಾ ಬಂಧನಕ್ಕೀಡಾಗಿದ್ದರು. ಯಾವುದನ್ನು ಸೆನ್ಸೇಷನ್ ಮಾಡಿದರೂ ಸತ್ಯ ಮರೆ ಆಗುವುದಿಲ್ಲ. ಕೊನೆಯಲ್ಲಿ ಸತ್ಯ ಹೊರಬರಲೇಬೇಕು’ ಎಂದಿದ್ದಾರೆ.
ಇದೀಗ ಇದೇ ವಿಚಾರವಾಗಿ ಮಾಧ್ಯಮಗಳ ವಿರುದ್ಧ ರಾಜ್ ಕುಂದ್ರಾ ಆಕ್ರೋಶ ವ್ಯಕ್ತಪಡಿಸಿದ್ದು, ಅನಗತ್ಯವಾಗಿ ನನ್ನ ಪತ್ನಿ ಹೆಸರನ್ನು ಮಾಧ್ಯಮಗಳು ಎಳೆದು ತರುತ್ತಿವೆ. ಶಿಲ್ಪಾ ಶೆಟ್ಟಿ ಅವರ ಹೆಸರನ್ನು ಈ ಪ್ರಕರಣದಿಂದ ದೂರವಿಡಿ. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಅವರ ಹೆಸರನ್ನು ಎಳೆದು ತರಲಾಗುತ್ತಿರುವುದು ತಮಗೆ ಬೇಸರ ತಂದಿದೆ ಎಂದು ಹೇಳಿದ್ದಾರೆ.