ಯಜ್ಞೋಪವೀತ ಧಾರಣೆಯಿಂದ ದೋಷಗಳು ದೂರ

0
Doshas are removed by Yajnapaveeta retention
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ : ಶ್ರಾವಣ ಮಾಸದಲ್ಲಿ ಶ್ರಾವಣಿ ಯಜ್ಞೋಪವೀತ ಧಾರಣೆ ಮಾಡುವುದರಿಂದ ಸಂವತ್ಸರದಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ಪಾಪ, ದೋಷಗಳು ದೂರವಾಗುತ್ತವೆ. ಯಜ್ಞೋಪವೀತ ಧರಿಸಿದ ವ್ಯಕ್ತಿಯ ಮನೋಬಲ ಹೆಚ್ಚುತ್ತದೆ ಎಂದು ವೇ.ಮೂ. ಶ್ರೀವಲಭಶಾಸ್ತ್ರಿ ಸದರಜೋಶಿ ಹೇಳಿದರು.

Advertisement

ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಸೋಮವಾರ ಶ್ರಾವಣಿ ಯಜ್ಞೋಪವೀತ ಧಾರಣೆ ಹಾಗೂ ಹೋಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಕೆಲವಷ್ಟು ಆಚರಣೆಗಳನ್ನು ಮಾಡಬೇಕಾಗುತ್ತದೆ. ಯಾವುದೇ ಕಾರಣಕ್ಕೆ ಜನಿವಾರ ತುಂಡಾದರೆ ತಕ್ಷಣ ಅದನ್ನು ಬದಲಿಸಬೇಕು. ಅಶೌಚ ಕರ್ಮಾದಿ ಕಾರ್ಯಗಳಿಂದ ಮೈಲಿಗೆಯುಂಟಾದರೆ ಹಳೆಯದನ್ನು ತೆಗೆದು ಹೊಸ ಜನಿವಾರವನ್ನು ಧರಿಸಬೇಕಾದುದು ಯಜ್ಞೋಪವೀತ ಧಾರಣಾಧರನ ಕರ್ತವ್ಯವಾಗಿದೆ ಎಂದರು.

ಯಜ್ಞೋಪವೀತದಲ್ಲಿ 9 ಎಳೆಗಳು ಇದ್ದು, ಜೀವಾತ್ಮವನ್ನು ಪ್ರತಿನಿಧಿಸುತ್ತದೆ. ಹಾಗೇ ಬಾಯಿಯಿಂದ ಒಳ್ಳೆಯ ಮಾತು, ಒಳ್ಳೆಯ ಆಹಾರಗಳನ್ನು ಸೇವಿಸಬೇಕು. ಕಣ್ಣಿನಿಂದ ಒಳ್ಳೆಯ ವಿಷಯಗಳನ್ನು ನೋಡಬೇಕು, ಕಿವಿಯಿಂದ ಒಳ್ಳೆಯ ವಿಷಯಗಳನ್ನು ಕೇಳಬೇಕೆಂಬ ತತ್ವವನ್ನೂ ಯಜ್ಞೋಪವೀತ ಸಾರುತ್ತದೆ ಎಂದರು.

ಈ ಸಂದರ್ಭದಲ್ಲಿ ಎ.ಜಿ. ಕುಲಕರ್ಣಿ, ಅರುಣ ಗ್ರಾಮಪುರೋಹಿತ, ಎಸ್.ಎಚ್. ಕುಲಕರ್ಣಿ, ನಾಗೇಶಭಟ್ಟ ಗ್ರಾಮಪುರೋಹಿತ, ಆನಂದ ಕುಲಕರ್ಣಿ, ಅಜಿತ ಕುಲಕರ್ಣಿ, ಮುಕುಂದ ಸೂರ್ಯಭಟ್, ಆನಂದ ಕಾಳೆ, ಪ್ರಶಾಂತ ಗ್ರಾಮಪುರೋಹಿತ, ನಾಗರಾಜ ನಾಡಗೇರ, ಪೃಥ್ವಿ ಕುಲಕರ್ಣಿ, ರಾಮಕೃಷ್ಣ ಸದರಜೋಶಿ ಸೇರಿದಂತೆ ಸಮಾಜದವರಿದ್ದರು.


Spread the love

LEAVE A REPLY

Please enter your comment!
Please enter your name here