ಬೆಂಗಳೂರು:- ಖ್ಯಾತ ಹಿರಿಯ ನಟ ಎಸ್. ನಾರಾಯಣ್ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಎಫ್ಐಆರ್ ದಾಖಲಾಗಿದ್ದು, ಸೊಸೆಯ ದೂರಿನ ಅನ್ವಯ ಎಸ್ ನಾರಾಯಣ್ A2 ಆರೋಪಿ ಆಗಿದ್ದಾರೆ. ಪತಿ ಪವನ್ A1 ಆಗಿದ್ದಾರೆ.
ಎಸ್, 2021ರಲ್ಲಿ ಪವಿತ್ರ ಹಾಗೂ ಎಸ್.ನಾರಾಯಣ್ ಪುತ್ರ ಪವನ್ ಮದುವೆ ಆಗಿದ್ದಾರೆ. ಇದೀಗ ಪವಿತ್ರಾ, ತನ್ನ ಪತಿ ಹಾಗೂ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾರೆ. ನನ್ನ ಪತಿ ಪವನ್ ಓದಿಲ್ಲ, ಹೀಗಾಗಿ ಎಲ್ಲಿಯೂ ಕೆಲಸ ಸಿಗ್ತಿರಲಿಲ್ಲ. ನಾನೇ ಎಲ್ಲಾ ಕೆಲಸ ಮಾಡಿ ಮನೆಯ ಸಂಸಾರ ಸಾಗಿಸುತ್ತಿದ್ದೆ. ಇದರ ಮಧ್ಯೆ ‘ಕಲಾ ಸಾಮ್ರಾಟ್ ಟೀಂ ಅಕಾಡಮಿ’ ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಮಾಡಲಾಗಿತ್ತು. ಅದನ್ನು ಆರಂಭಿಸಲು ಪವನ್, ನಮ್ಮ ಬಳಿ ಹಣ ಕೇಳಿದ್ದ. ಆಗ ನಾನು ತಾಯಿಯ ಒಡವೆಗಳನ್ನ ಅಡವಿಟ್ಟು ಹಣ ಕೊಟ್ಟಿದ್ದೆ. ಕೊನೆಗೆ ಆ ಸಂಸ್ಥೆ ಲಾಸ್ ಆಗಿ ಮುಚ್ಚಲಾಯಿತು. ಅಲ್ಲಿ ಆಗಿರುವ ನಷ್ಟ ತುಂಬಿಸಿಕೊಳ್ಳಲು ನಾನು 10 ಲಕ್ಷ ರೂಪಾಯಿ ಸಾಲ ಮಾಡಿ ಪವನ್ಗೆ ನೀಡಿದ್ದೆ.
ಇಷ್ಟೆಲ್ಲಾ ಆದರೂ ಪ್ರತಿ ದಿನ ಅತ್ತೆ ಭಾಗ್ಯಲಕ್ಷ್ಮಿ ಹಾಗೂ ಪತಿ ನನ್ನ ಮೇಲೆ ಹಲ್ಲೆ ನಡೆಸಿ ಹಣ ತರುವಂತೆ ಒತ್ತಾಯ ಮಾಡಿದ್ದಾರೆ. ಅದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಅತ್ತೆ ಭಾಗ್ಯಲಕ್ಷ್ಮಿ ಹಾಗು ಪತಿ ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



