ಕೋಲಾರ: ಮೊಬೈಲ್ʼನಲ್ಲಿ ರೀಲ್ಸ್ ನೋಡುತ್ತಲೇ ಚಾಲಕ ಸರ್ಕಾರಿ ಬಸ್ ಚಲಾಯಿಸಿದ ಘಟನೆ ಕೋಲಾರದಲ್ಲಿ ನಡೆದಿತ್ತು. ಈ ಸಂಬಂಧ ಚಾಲಕನನ್ನು ಅಮಾನತು ಮಾಡಿ ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಆದೇಶ ಹೊರಡಿಸಿದ್ದಾರೆ. ಶ್ರೀನಿವಾಸ್ ಅಮಾನತ್ತಾದ ಸರ್ಕಾರಿ ಬಸ್ ಚಾಲಕನಾಗಿದ್ದು,
ಕೋಲಾರದಿಂದ ಪಾವಗಡ ಮಾರ್ಗದ ಬಸ್ ಚಾಲಕ ಈ ರೀತಿಯ ನಿರ್ಲಕ್ಷ್ಯ ತೋರಿದ್ದಾನೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿತ್ತು. ಎಚ್ಚೆತ್ತ ಹಿರಿಯ ಅಧಿಕಾರಿಗಳು ಚಾಲಕ ಶ್ರೀನಿವಾಸ್ರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಬಸ್ ಚಾಲಕ ಹತ್ತಾರು ಪ್ರಯಾಣಿಕರ ಜೀವ ಕೈಯಲ್ಲಿಟ್ಟುಕೊಂಡು ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಬಸ್ ಚಲಾಯಿಸಿದ್ದಾನೆ. ತನ್ನ ಕೈಯಲ್ಲಿ ಪ್ರಯಾಣಿಕರ ಜೀವವಿದೆ ಎಂಬುದನ್ನು ಮರೆತು ಮೊಬೈಲ್‌ನಲ್ಲಿ ಮುಳುಗಿದ್ದ ಬಸ್ ಚಾಲಕನ ನಿರ್ಲಕ್ಷ್ಯದಿಂದ ಪ್ರಯಾಣಿಕರು ರೋಸಿ ಹೋಗಿದ್ದಾರೆ. ಈ ಹಿನ್ನೆಲೆ ಪ್ರಯಾಣಿಕರೊಬ್ಬರು ಚಾಲಕನ ನಿರ್ಲಕ್ಷ್ಯವನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.