Ladies Finger: ಬೆಂಡೆಕಾಯಿ ಸೇವನೆ ಹೃದಯ ರೋಗಿಗಳಿಗೆ ಬಹಳ ಒಳ್ಳೆಯದು..!

0
Spread the love

ಬೆಂಡೆಕಾಯಿ ನೆಚ್ಚಿನ ತರಕಾರಿಗಳಲ್ಲಿ ಒಂದಾಗಿದೆ. ಇದನ್ನು ನಮ್ಮ ದೇಶದಲ್ಲಿ ಹಲವು ಬಗೆಯ ಅಡುಗೆಗಳಲ್ಲಿ ಬಳಸುತ್ತಾರೆ. ತಿನ್ನಲು ರುಚಿಯಾಗಿರುತ್ತದೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೆಂಡೆಕಾಯಿ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಸಮೃದ್ಧವಾಗಿದೆ. ಇದು ಪ್ರೋಟೀನ್, ಕೊಬ್ಬು, ಫೈಬರ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸೋಡಿಯಂ ಅನ್ನು ಹೊಂದಿರುತ್ತದೆ.

Advertisement

ಪೋಷಕಾಂಶಗಳ ಸಮೃದ್ಧತೆ: ಬೆಂಡೆಕಾಯಿಯಲ್ಲಿ ಪೊಲಿಫೆನೊಲ್ಸ್​​ ಸಮೃದ್ಧವಾಗಿದೆ. ಅವರು ಆ್ಯಂಟಿ ಆಕ್ಸಿಡೆಂಟ್​ ಅಂಶಗಳಿದ್ದು, ರ್ಯಾಡಿಕಲ್​ ಮುಕ್ತವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ರಕ್ತದೊತ್ತಡ, ಕೊಲೆಸ್ಟ್ರಾಲ್​ ಮತ್ತು ಊರಿಯೂತ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ಇದಕ್ಕಿಂತ ಹೆಚ್ಚಾಗಿ ಬೆಂಡೆಕಾಯಿ ರಕ್ತದ ಗ್ಲೂಕೋಸ್​ ಮಟ್ಟವನ್ನು ಸ್ಥಿರವಾಗಿ ಇಡಲು ಸಹಾಯ ಮಾಡುತ್ತದೆ. ಇದು ಗ್ಲುಕೋಸ್​​ ರಕ್ತದೊಳಗೆ ಸೇರುವುದನ್ನು ತಪ್ಪಿಸುತ್ತದೆ. ಬೆಂಡೆಕಾಯಿಯಲ್ಲಿರುವ ಈ ಗುಣವೂ ಪರೋಕ್ಷವಾಗಿ ಹೃದಯದ ಆರೋಗ್ಯಕ್ಕೆ ಸಹಾಯ ಮಾಡಿ, ಹೃದಯ ರೋಗವನ್ನು ತಡೆಯುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಬೆಂಡೆಯಲ್ಲಿದೆ ಹಲವು ಅಂಶ: ಬೆಂಡೆಕಾಯಿಯು ಬೇಸಿಗೆ ಋತುಮಾನದ ಬೆಳೆಯಾಗಿದ್ದು, ಇದರಲ್ಲಿ ಮಿನರಲ್ಸ್​, ವಿಟಮಿನ್ಸ್​​, ಆ್ಯಂಟಿ – ಆಕ್ಸಿಡೆಂಟ್​ ಮತ್ತು ಫೈಬರ್​ ಇದೆ. ವಿಟಮಿನ್​ ಸಿ, ವಿಟಮಿನ್​ ಎ, ವಿಟಮಿನ್​ ಕೆ, ಕ್ಯಾಲ್ಸಿಯಂ, ಫೈಬರ್​, ಪೋಟಾಶಿಯಂ, ಫೋಲಿಕ್​ ಆಸಿಡ್​ ಅಂಶ ಇರುತ್ತದೆ. ಇದು ಸ್ಥೂಲಕಾಯ ನಿರ್ವಹಣೆಗೆ ಸಹಾಯ ಮಾಡುವ ಜೊತೆಗೆ ಮಧುಮೇಹ ಮತ್ತು ಹೃದಯ ಸಂಬಂಧಿ ರೋ ನಿರ್ವಹಣೆ ಮಾಡುತ್ತದೆ. ಅಷ್ಟೇ ಅಲ್ಲದೇ ಇದು ದೇಹದ ವಿಷಪೂರಿತ ಅಂಶವನ್ನು ದೂರ ಮಾಡುತ್ತದೆ.

ಇದರಲ್ಲಿನ ಫೈಬರ್​ ಅಂಶವು ಮಲಬದ್ದತೆ ನಿವಾರಣೆಗೆ ಸಹಾಯ ಮಾಡುತ್ತದೆ. ಜೀರ್ಣ ಕ್ರಿಯೆಗೆ ಸುಧಾರಿಸುವಲ್ಲಿ ಇದು ಪ್ರಮುಖವಾಗದೆ. ಅಲ್ಲದೇ ಬೆಂಡೆಕಾಯಿಯಲ್ಲಿರುವ ಆ್ಯಂಟಿ – ಆಕ್ಸಿಡೆಂಟ್​​ ಒತ್ತಡವನ್ನು ಕಡಿಮೆ ಮಾಡಿ, ಚರ್ಮದ ಮೇಲೆ ಹಾಕುವ ಹಾನಿ ತಡೆಯುತ್ತದೆ. ವಯಸ್ಸಾಗುವಿಕೆ ಪ್ರಕ್ರಿಯೆನ್ನು ನಿಧಾನಗೊಳಿಸುತ್ತದೆ.


Spread the love

LEAVE A REPLY

Please enter your comment!
Please enter your name here