ಶಿಕ್ಷಕನಿಗೆ ಪರ್ಯಾಯ ಯಾವುದೂ ಇಲ್ಲ : ಸಿದ್ದರಾಮ ಮನಹಳ್ಳಿ

0
Educational Rehabilitation Programme
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಮಕ್ಕಳಿಗೆ ಕಲಿಸುವುದು ನಿಜವಾದ ಶಿಕ್ಷಣವಲ್ಲ. ಸ್ವಪ್ರೇರಣೆಯಿಂದ ಮಕ್ಕಳೇ ಕಲಿಯುವಂತೆ ಮಾಡುವುದು ನಿಜವಾದ ಶಿಕ್ಷಣ. ಈಗ ಹೊಸದಾಗಿ ಜಾರಿಗೆ ಬಂದಿರುವ ಶಿಕ್ಷಣ ನೀತಿಯು ಇದೇ ಮಾತನ್ನು ಪುರಸ್ಕರಿಸುತ್ತಿದ್ದು, ಶಿಕ್ಷಕರು ಮಕ್ಕಳಿಗೆ ಕಲಿಸಲು ಮುಂದಾಗದೆ ಕಲಿಯುವಂತೆ ಪ್ರೇರಣೆ ನೀಡಬೇಕಾದುದು ಅವಶ್ಯಕ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಸಿದ್ದರಾಮ ಮನಹಳ್ಳಿ ಹೇಳಿದರು.

Advertisement

ಇಲ್ಲಿನ ಶ್ರೀ ಅನ್ನದಾನೇಶ್ವರ ಸಭಾಂಗಣದಲ್ಲಿ ಅಕ್ಷರ ಭಾರತ ಪ್ರತಿಷ್ಠಾನ ಗದಗ ಹಾಗೂ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಸಹಯೋಗದಲ್ಲಿ ನಡೆದಿರುವ ಶೈಕ್ಷಣಿಕ ಪುನಶ್ಚೇತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಣದಲ್ಲಿ ಶಿಕ್ಷಕನಿಗೆ ಪರ್ಯಾಯ ಎಂಬುದು ಯಾವುದೂ ಇಲ್ಲ. ಶಿಕ್ಷಕನೇ ಒಂದು ಬಲಿಷ್ಠವಾದ ಕಲಿಕೋಪಕರಣ. ಇತರೆ ಎಲ್ಲ ಕಲಿಕೋಪಕರಣಗಳು ಅವನಿಗೆ ಕಲಿಸಲು ಸಹಾಯಕವಷ್ಟೆ. ಬೋಧನೆ ಎಂಬುದು ಮನೋ ವ್ಯಾಪಾರವಾಗಿದ್ದು, ಶಿಕ್ಷಕರು ಈ ವ್ಯಾಪಾರವನ್ನು ವರ್ಗ ಕೋಣೆಗಳಲ್ಲಿ ಅತ್ಯಂತ ಸಮರ್ಪಕವಾಗಿ ಮಾಡಬೇಕಿದೆ. ಜಗತ್ತನ್ನು ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ. ಈ ಹಿಂದಿನ ದಿನಗಳಿಗಿಂತಲೂ ಇಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಇನ್ನಿಲ್ಲದ ಮಹತ್ವ ಸಿಗುತ್ತಿದೆ. ಆದ್ದರಿಂದ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಸಮರ್ಪಕವಾಗಿ ಸಿದ್ಧ ಮಾಡುವತ್ತ ಗಮನ ಹರಿಸಬೇಕೆಂದು ಹೇಳಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ವೀರಾಪೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


Spread the love

LEAVE A REPLY

Please enter your comment!
Please enter your name here