ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಶೈಕ್ಷಣಿಕ ಭೇಟಿ

0
Educational visit to Industrial Development Corporation
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭಾರತದ ಕೈಮಗ್ಗ ಕ್ಷೇತ್ರವು ಅತಿದೊಡ್ಡ ಉದ್ಯಮವಾಗಿದೆ. ಇದು ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸುವ ಸಂಪ್ರದಾಯವನ್ನು ಹೊಂದಿದ್ದು, ಭಾರತದ ಕೈಮಗ್ಗ ನೇಕಾರರು ತಮ್ಮ ವಿಶಿಷ್ಟವಾದ ನೇಯ್ಗೆ ಮತ್ತು ಮುದ್ರಣ ಶೈಲಿಗೆ ಜಾಗತಿಕವಾಗಿ ಹೆಸರುವಾಸಿಯಾಗಿದೆ ಎಂದು ಕೆ.ಡಿ.ಡಿ.ಸಿ ವ್ಯವಸ್ಥಾಪಕ ಚಂದ್ರಶೇಖರ ಬಾವಿಕಟ್ಟಿ ಹೇಳಿದರು.

Advertisement

ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅಂತಿಮ ವರ್ಷದ ಗೃಹವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ನರಸಾಪುರದಲ್ಲಿರುವ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಭೇಟಿ ನೀಡಿ ವಿವಿಧ ಪ್ರಕಾರದ ವಸ್ತç ನೇಯುವ ವಿಧಾನಗಳನ್ನು ವೀಕ್ಷಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ನೇಯ್ಗೆಗೆ ಅವಶ್ಯಕವಾದ ಕಚ್ಚಾವಸ್ತುಗಳ ಸಂಸ್ಕರಣೆ, ಉತ್ಪಾದನೆ, ಮಾರಾಟ, ತಂತ್ರಜ್ಞಾನ, ಕೈಮಗ್ಗದ ಗುರುತಿನ ಬಗ್ಗೆ ಹಾಗೂ ನೇಕಾರರಿಗೆ ಸರಕಾರದಿಂದ ದೊರಕುವ ಯೋಜನೆಗಳ ಕುರಿತಾದ ವಿವರವಾದ ಮಾಹಿತಿಯನ್ನು ಪಡೆದುಕೊಂಡರು.

ಮಹಾವಿದ್ಯಾಲಯದ ಪ್ರಚಾರ್ಯ ಡಾ.ಎ.ಕೆ. ಮಠ ಅವರ ನೇತೃತ್ವದಲ್ಲಿ ಭೇಟಿ ಕಾರ್ಯಕ್ರಮ ನೆರೆವೇರಿತು. ಗೃಹವಿಜ್ಞಾನ ವಿಭಾಗದ ಮುಖ್ಯಸ್ಥರಾದ ವೀಣಾ ತಿರ್ಲಾಪೂರ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಹರ್ಷಾ ನಿಲುಗಲ್ ಮತ್ತು ಪ್ರೊ. ವಾಗೀಶ್ ರೇಶ್ಮಿ ವಿದ್ಯಾರ್ಥಿಗಳೊಂದಿಗೆ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here