ಕಾಡನ್ನು ಬೆಳೆಸಿ ನಾಡನ್ನು ಉಳಿಸಿ : ರಾಘವೇಂದ್ರ ಬಿ

0
Ek Paid Ma Ke Naam campaign
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಮಾನವನ ಜೀವನಕ್ಕೆ ಅಗತ್ಯವಾದ ಆಮ್ಲಜನಕವನ್ನು ನೀಡಬಲ್ಲ ಗಿಡಮರಗಳನ್ನು ಉಳಿಸಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದು ಗಜೇಂದ್ರಗಡ ಸಾರಿಗೆ ಘಟಕ ವ್ಯವಸ್ಥಾಪಕ ರಾಘವೇಂದ್ರ ಬಿ ಹೇಳಿದರು.

Advertisement

ಸಮೀಪದ ನಿಡಗುಂದಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಏಕ್ ಪೇಡ್ ಮಾ ಕೇ ನಾಮ್ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಒಂದು ಸಸಿ ನೆಟ್ಟು ಮರವನ್ನಾಗಿ ಬೆಳೆಸಿದಲ್ಲಿ, ಒಂದು ಮಗುವನ್ನು ಬೆಳೆಸಿದಂತೆ. ಒಂದು ಸಸಿ ಬೆಳೆಸಲು, ಅದಕ್ಕೆ ನೀರುಣಿಸಲು ಬೇಕಾಗುವ ಸಮಯ ಕೇವಲ 2-3 ನಿಮಿಷ. ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿ, ಬೆಳೆಸುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕಿದೆ ಎಂದರು.

ಎಟಿಎಸ್ ಸಂಗಪ್ಪ ಜಡ್ರಾಮಕುಂಟಿ, ಎನ್.ಎ. ರಂಗ್ರೇಜ, ಕೆ.ಪಿ. ಧರಣಾ, ಎಸ್.ವಿ. ಗಂಗರಗೊಂಡ, ಗ್ರಾ.ಪಂ ಸದಸ್ಯ ಎಂ.ಎ. ಮುಲ್ಲಾ, ಶಿವಪ್ಪ ಅಣಗೌಡ್ರ, ಎಸ್.ಎ. ಅರಮನಿ, ಮಲ್ಲಯ್ಯ ಬಣ್ಣದ ಸೇರಿದಂತೆ ಇತರರಿದ್ದರು.


Spread the love

LEAVE A REPLY

Please enter your comment!
Please enter your name here