ಉತ್ತಮ ಆಡಳಿತ ನೀಡುತ್ತೇವೆ : ಕಾರ್ತಿಕ ಶಿಗ್ಗಾಂವಿ

0
Elected and sworn in as School Prime Minister
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಶಾಲೆಯ ಮಕ್ಕಳ ಅಭಿವೃದ್ಧಿಗಾಗಿ ಕಾಯಕ ಮಾಡುವೆ ಎಂದು ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರ ಶಾಲಾ ಪ್ರಧಾನಮಂತ್ರಿ ಕಾರ್ತಿಕ ಶಿಗ್ಗಾಂವಿ ಹೇಳಿದರು.

Advertisement

ಅವರು ಶಾಲಾ ಸಂಸತ್ ರಚನೆಯಲ್ಲಿ ಶಾಲಾ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿ, ಗುರುಗಳ ಹಾಗೂ ಎಸ್‌ಡಿಎಂಸಿ ಸರ್ವ ಸದಸ್ಯರ ಸಹಾಯ-ಸಹಕಾರದಿಂದ ಶಾಲೆಯ ಮಕ್ಕಳ ಅಭಿವೃದ್ಧಿಗಾಗಿ ಕಾಯಕ ಮಾಡಿ ಉತ್ತಮ ಆಡಳಿತ ನೀಡಿ ಶಾಲೆಯ ಕೀರ್ತಿ ಹೆಚ್ಚಿಸುತ್ತೇವೆ ಎಂದರು.

ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯ ರೀತಿಯಲ್ಲಿ ಮತದಾನ ಪ್ರಕ್ರಿಯೆ ಮೂಲಕ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಗಿತ್ತು. ಶಾಲಾ ಉಪಪ್ರಧಾನಿಯಾಗಿ ಮಾಹಾದೇವಪ್ಪ ಕಾಗಿ, ಪ್ರಾರ್ಥನಾ ಮಂತ್ರಿಯಾಗಿ ಪ್ರಿಯಾಂಕಾ ಮಟ್ಟಿ, ಶಿಕ್ಷಣ ಮಂತ್ರಿಯಾಗಿ ಶಾಹೀದ ಖವಾಸ, ಆಹಾರ ಮಂತ್ರಿಯಾಗಿ ಶ್ರೀನಿಧಿ ಸಿದ್ದನಗೌಡರ, ರಕ್ಷಣಾ ಮಂತ್ರಿಯಾಗಿ ಚನ್ನಬಸಪ್ಪ ಅಳಗವಾಡಿ, ಕ್ರೀಡಾ ಮಂತ್ರಿಯಾಗಿ ಮಹ್ಮದ್‌ಆದೀಲ್ ಮಾಣೀಕ್‌ಬಾಯಿ, ನೀರಾವರಿ ಮಂತ್ರಿಯಾಗಿ ಮನೋಜ ಸಿದ್ದನಗೌಡರ, ಪ್ರವಾಸ ಮಂತ್ರಿಯಾಗಿ ಸಲೀಮ್‌ಅಹ್ಮದ್ ಅಣ್ಣೀಗೇರಿ, ಪರಿಸರ ಮಂತ್ರಿಯಾಗಿ ಅನ್ವರ್ ಮುಲ್ಲಾ ಪ್ರಮಾಣವಚನ ಸ್ವೀಕರಿಸಿದರು.

ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡರ, ಎಸ್‌ಡಿಎಂಸಿ ಅಧ್ಯಕ್ಷ ವಿ.ಡಿ. ಸಿದ್ದನಗೌಡರ, ಎಂ.ಎಂ. ಮೇಗಲಮನಿ, ಎಂ.ಎಂ. ಕೊಪ್ಪಳ, ಕೆ.ಎಂ. ಹೆರಕಲ್, ಮಂಜುನಾಥ ಕಲ್ಯಾಣಮಠ, ಎಚ್.ಆರ್. ಭಜೆಂತ್ರಿ, ವಿ.ಎಂ. ಕಂಠಿ, ಎಸ್.ವಿ. ಹಿರೇಮಠ, ಟಿ.ವೀಣಾ, ನಂದಾ ಮಟ್ಟಿ, ಶಾಭಾನಾ ಅಬ್ಬುನವರ, ಪವಿತ್ರಾ ಮಟ್ಟಿ, ಜ್ಯೋತಿ ಜಾಧವ ಇದ್ದರು.


Spread the love

LEAVE A REPLY

Please enter your comment!
Please enter your name here