ವಿಜಯಸಾಕ್ಷಿ ಸುದ್ದಿ, ಡಂಬಳ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಬೆಂಗಳೂರಿನಲ್ಲಿ ಜರುಗಿದ ಸಮಿತಿಯ ಸಭೆಯಲ್ಲಿ ಗದಗ ಜಿಲ್ಲಾ ಸದಸ್ಯರನ್ನಾಗಿ ಮುಂಡರಗಿ ತಾಲೂಕಿನ ಗ್ರಾ.ಪಂ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ವಿರೂಪಾಕ್ಷಪ್ಪ ಮೇವುಂಡಿ ಅವರನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ಎಂ.ಬಿ. ನಾಡಗೌಡರ, ಪ್ರಧಾನ ಕಾರ್ಯದರ್ಶಿ ಜೆ.ಎಂ. ಜೈನೆಖಾನ ಆದೇಶ ಹೊರಡಿಸಿದ್ದಾರೆ.
ಬಸವರಾಜ ಮೇವುಂಡಿ ಅವರಿಗೆ ಹಿರಿಯ ಅಧಿಕಾರಿಗಳು, ಮುಂಡರಗಿ ತಾಲೂಕಾ ಗ್ರಾ.ಪಂ ನೌಕರರು, ಗದಗ ಜಿಲ್ಲಾ ಸಮಿತಿ, ಮುಂಡರಗಿ ತಾಲೂಕು ಸಮಿತಿಯ ಸದಸ್ಯರು, ಜಂತ್ಲಿ ಶಿರೂರಿನ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.



