ವಿಜಯಸಾಕ್ಷಿ ಸುದ್ದಿ, ಗದಗ: ಆದಿಕವಿ, ರಾಮಾಯಣ ಮಹಾಕಾವ್ಯದ ಮೊದಲ ರಚನೆಕಾರರು ಮಹರ್ಷಿ ವಾಲ್ಮೀಕಿಯವರು. ನಾರದ ಮಹರ್ಷಿಗಳ ಉಪದೇಶ ಪಡೆದು ತಾವು ಮಾಡುತ್ತಿದ್ದ ಅಸಹಜ ಕಾರ್ಯಗಳ ಪಾಪಕೃತ್ಯಗಳಲ್ಲಿ ಬಂಧುಗಳು ಭಾಗಿಯಾಗುವುದಿಲ್ಲ ಎಂಬುದನ್ನು ಅರಿತು, ಅಂದೇ ಮನಃಪರಿವರ್ತನೆ ಹೊಂದಿ, ಮಹಾನ್ ತಪಸ್ವಿಗಳಾಗಿ, ದೈವತ್ವವನ್ನು ಪಡೆದು, ರಾಮಾಯಣ ಮಹಾಕಾವ್ಯ ರಚಿಸಿ ಇಂದು ಎಲ್ಲರಿಂದಲೂ ಪೂಜಿಸಲ್ಪಡುತ್ತಿದ್ದಾರೆ ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಾದ ರಾಜಾರಾಮ ಪವಾರ ನುಡಿದರು.
ಅವರು ಗದಗ-ಬೆಟಗೇರಿ ನಗರಸಭೆ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.
ಸಮಾರಂಭದಲ್ಲಿ ಕಾರ್ಯಾಲಯ ವ್ಯವಸ್ಥಾಪಕ ಪರಶುರಾಮ ಶೇರಖಾನೆ, ಸ.ಕಾ.ನಿ. ಅಭಿಯಂತರ ಎಚ್.ಎ. ಬಂಡಿವಡ್ಡರ್, ಶ್ರೀಶೈಲ ಸಂಕನಗೌಡ್ರ, ಎಂ.ಆರ್. ಪಾಟೀಲ, ಡಿ.ಎಚ್. ಸೀತಿಮಣಿ, ನಾಗರಾಜ ಗುತ್ತಿ, ಶಬಾನಾ ದಳವಾಯಿ, ಪುಷ್ಪಲತಾ ಕಡೆಮನಿ, ಲೋಕೇಶ್ ಗಾಡಿಗೋಳಿ, ರಾಜು ಬಾಕಳೆ, ಮುಜಾವರ, ರೇಣುಕಾ ಭಟ್, ರಮೇಶ್ ನಾಗಲೀಕರ ಮುಂತಾದವರು ಭಾಗವಹಿಸಿದ್ದರು.



