ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಘಟಕ ಗದಗದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಪಿ.ಎಚ್. ಕಡಿವಾಲ ಅವರ ನಿವೃತ್ತಿಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರಿ ಪ್ರೌಢಶಾಲಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಆದ ಬಿ.ಎಫ್. ಪೂಜಾರ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಹೆಚ್. ಸವದತ್ತಿಯವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಎಂ.ಎಸ್. ಗಾರವಾಡ ನೂತನ ಜಿಲ್ಲಾ ಕಾರ್ಯದರ್ಶಿಯಾಗಿ, ರವಿರಾಜ ಪವಾರ ರಾಜಿನಾಮೆಯಿಂದ ತೆರವಾಗಿದ್ದ ಜಿಲ್ಲಾ ಉಪಾಧ್ಯಕ್ಷರ ಸ್ಥಾನಕ್ಕೆ ಎಸ್.ಎಸ್. ಗಾಳಿಯವರು ಆಯ್ಕೆಯಾಗಿದ್ದಾರೆ.
ಜಿಲ್ಲಾ ಉಪಾಧ್ಯಕ್ಷ ರವಿರಾಜ ಪವಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಗಮಿತ ಜಿಲ್ಲಾಧ್ಯಕ್ಷ ಪಿ.ಎಚ್. ಕಡಿವಾಲ ಹಾಗೂ ಕಾರ್ಯದರ್ಶಿ ಎಂ.ಹೆಚ್. ಸವದತ್ತಿ ಅವರನ್ನು ಪ್ರೀತಿಪೂರ್ವಕ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮಿಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ, ವಿವಿಧ ತಾಲೂಕಿನ ಪದಾಧಿಕಾರಿಗಳಾದ ಶರಣಪ್ಪ ನಾಗರಳ್ಳಿ, ನಾಗರಾಜ ಹಳ್ಳಿಕೇರಿ, ಶಂಕರ ಸರ್ವದೆ, ಎಂ.ಬಿ. ಹೊಸಮನಿ, ಜಗದೀಶ್ ಯಾಳಗಿ, ಪ್ರಕಾಶ ನಡುವಿನಹಳ್ಳಿ, ಈಶ್ವರಯ್ಯ ಹಿರೇಮಠ್, ಶರಣಬಸಪ್ಪ ಡಾಣಾಪುರ್, ಎಸ್.ಎಲ್. ಮರಿಗೌಡರ್, ಶಿವಾನಂದ ಮಣ್ಣೂರಮಠ, ಮಹಮ್ಮದ್ ಶಫಿ ಯರಗುಡಿ, ಮನೋಹರ ಎಸ್, ಷಣ್ಮುಖಪ್ಪ ಹರ್ತಿ, ಎಸ್.ಎ. ಯರಗುಡಿ, ಉಮಾ ಮಟ್ಟಿ, ನಝೀರ್ ಸರಕವಾಸ್, ಆನಂದ ಮುಳಗುಂದ, ವೆಂಕಟೇಶ್ ಅರ್ಕಸಾಲಿ, ಮಾರುತಿ ನಾಯಕ, ನೂರ್ ಅಹಮದ್ ನದಾಫ್, ಉಮೇಶ್ ನಿಪ್ಪಾಣಿಕರ್, ಎನ್.ಎನ್. ಸುಣಗಾರ, ಪಿ.ಪಿ. ಟಿಕಾರೆ, ಎಂ.ಎಂ. ಹಳಪೇಟೆ, ಶಂಬಣ್ಣ ಗೌಡನಾಯ್ಕರ್ ಉಪಸ್ಥಿತರಿದ್ದರು.



