ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿವನಸಮುದ್ರ ಬಳಿಯ ಖಾಸಗಿ ವಿದ್ಯುತ್ ಉತ್ಪಾದನಾ ಘಟಕದ ಬಳಿ ಇರುವ ನಾಲೆಯಲ್ಲಿ ಆನೆಯೊಂದು ಕಳೆದ ಎರಡು ದಿನಗಳಿಂದ ಸಿಲುಕಿಕೊಂಡಿದ್ದು, ಅದನ್ನು ಮೇಲೆತ್ತಲು ಅರಣ್ಯ ಇಲಾಖೆ ನಿನ್ನೆ ಕೂಡ ಪ್ರಯತ್ನ ಮಾಡಿತ್ತು.
ಆದರೆ ಯಾವುದೇ ಪ್ರಯೋಜ ಆಗಿರಲಿಲ್ಲ. ನಾಲೆಯಲ್ಲಿ ನೀರು ಹೆಚ್ಚಾಗಿದ್ದ ಕಾರಣ ಕಾರ್ಯಾಚರಣೆಗೆ ತೊಡಕಾಗಿತ್ತು. ಇಂದು ನಾಲೆಯ ನೀರನ್ನು ತಗ್ಗಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ. ನಾಲೆಯಲ್ಲಿ ನೀರು ಕುಡಿಯಲು ಬಂದಿದ್ದಾಗ ಆನೆ ಸಿಲುಕಿಕೊಂಡಿದೆ. ನಿನ್ನೆ ನೀರು ಹೆಚ್ಚಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಇಂದು ನಾಲೆಯ ನೀರಿನ ಮಟ್ಟವನ್ನು ಕಡಿಮೆ ಮಾಡಿ,
ಕ್ರೇನ್ ಬಳಸಿ ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಸಿಬ್ಬಂದಿ ಸಜ್ಜಾಗಿದ್ದು, ಆನೆ ರಕ್ಷಣೆಗೆ ಬೆಂಗಳೂರಿನಿಂದ ಹೈಡ್ರಾಲಿಕ್ ಕ್ರೇನ್ಗಳನ್ನು ತರಲಾಗಿದೆ. ಇನ್ನು ಮೈಸೂರಿನಿಂದ ಅರವಳಿಕೆ ತಜ್ಞರು, ಅರಣ್ಯ ಸಿಬ್ಬಂದಿ ಬಂದಿದ್ದಾರೆ. ಮಂಡ್ಯ ಡಿಎಫ್ಓ, ಮಳವಳ್ಳಿ ತಹಸಿಲ್ದಾರ್ ನೇತೃತ್ವದಲ್ಲಿ ಆನೆ ಕಾರ್ಯಾಚರಣೆ ನಡೆಯುತ್ತಿದೆ.


