-
ವಿಜಯಸಾಕ್ಷಿ ಸುದ್ದಿ, ಗದಗ: ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಪ್ರಸ್ತುತಪಡಿಸುವ `ಹಾವೇರಿ ಸಂಸದ ಕ್ರೀಡಾ ಮಹೋತ್ಸವ 2025-26’ನ್ನು ಗ್ರಾಮೀಣ ಪ್ರದೇಶದ ಯುವಜನತೆಗೆ ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸಲು ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಾಗೂ ಪ್ರತಿ ಸಂಸದರು ಕೂಡಾ ತಮ್ಮ ಲೋಕಸಭಾ ವ್ಯಾಪ್ತಿಯಲ್ಲಿನ ಮಕ್ಕಳಿಗೆ ಮತ್ತು ಯುವಜನತೆಗೆ ಕ್ರೀಡೆಗಳಲ್ಲಿ ಪ್ರೋತ್ಸಾಹ ನೀಡಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಲೋಕಸಭಾ ವ್ಯಾಪ್ತಿಯಲ್ಲಿ ಸಂಸದ ಕ್ರೀಡಾ ಮಹೋತ್ಸವವನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಂಘಟಿಸಲು ಸೂಚಿಸಿದೆ.
ಸಂಸದ ಕ್ರೀಡಾ ಮಹೋತ್ಸವವನ್ನು ತಾಲೂಕು ಮಟ್ಟದಲ್ಲಿ ಗದಗ ಜಿಲ್ಲೆಯ 7 ತಾಲೂಕುಗಳಲ್ಲಿ ಆಯೋಜಿಸಲಾಗುತ್ತಿದ್ದು, ಗದಗ ತಾಲೂಕಿನಲ್ಲಿ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ, ರೋಣ ತಾಲೂಕಿನಲ್ಲಿ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣ, ಶಿರಹಟ್ಟಿ ತಾಲೂಕಿನಲ್ಲಿ ಎಫ್.ಎಂ. ಡಬಾಲಿ ತಾಲೂಕು ಕ್ರೀಡಾಂಗಣ, ಮುಂಡರಗಿ ತಾಲೂಕಿನಲ್ಲಿ ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣ, ನರಗುಂದ ತಾಲೂಕಿನಲ್ಲಿ ತಾಲೂಕು ಕ್ರೀಡಾಂಗಣ, ಲಕ್ಷೆö್ಮÃಶ್ವರ ತಾಲೂಕಿನಲ್ಲಿ ಉಮಾ ಮಹಾವಿದ್ಯಾಲಯದ ಮೈದಾನ ಮತ್ತು ಗಜೇಂದ್ರಗಡ ತಾಲೂಕಿನಲ್ಲಿ ಎಸ್.ಎಂ. ಭೂಮರೆಡ್ಡಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ.
100, 400 ಮೀ ಓಟ, ಗುಂಡು ಎಸೆತ, ಉದ್ದ ಜಿಗಿತ, 4*100 ಮೀಟರ್ ರಿಲೇ ವೈಯಕ್ತಿಕ ಕ್ರೀಡೆಗಳನ್ನು ಹಾಗೂ ಗುಂಪು ಆಟಗಳಾದ ವಾಲಿಬಾಲ್, ಖೋ-ಖೋ ಮತ್ತು ಕಬಡ್ಡಿ, ಮಲ್ಲಕಂಬ (ಜಿಲ್ಲಾ ಮಟ್ಟದಲ್ಲಿ ಮಾತ್ರ) ಆಟಗಳನ್ನು 17ರಿಂದ 25 ವಯೋಮಿತಿಯ ಬಾಲಕ/ಬಾಲಕಿಯರಿಗೆ ಪ್ರತ್ಯೇಕವಾಗಿ ಆಯೋಜಿಸಲಾಗುತ್ತದೆ. ಸದರಿ ಮಹೋತ್ಸವದಲ್ಲಿ ಭಾಗವಹಿಸುವ ಕ್ರೀಡಾಪಟುಗಳು bommಚಿi.bಚಿsಚಿvಚಿಡಿಚಿರಿ@sಚಿಟಿsಚಿಜ.ಟಿiಛಿ.iಟಿ/smಆಗಿhಛಿಕಿvಎ hಣಣಠಿs://sಚಿಟಿsಚಿಜ.ಟಿiಛಿ.iಟಿರಿsmಆಗಿಊಛಿಕಿvರಿ hಣಣಠಿs://sಚಿಟಿsಚಿಜಞheಟmಚಿhoಣsಚಿv.iಟಿ/ ಲಿಂಕ್ ಮುಖಾಂತರ ಕೆಳಕಾಣಿಸಿದ ಕ್ಯೂಆರ್ ಕೋಡ್ ಬಳಸಿ ಜನವರಿ 20ರೊಳಗಾಗಿ ಹೆಸರನ್ನು ನೋಂದಾಯಿಸಿ ಭಾಗವಹಿಸುವುದು ಕಡ್ಡಾಯವಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶರಣು ಗೋಗೇರಿ ತಿಳಿಸಿದ್ದಾರೆ.
ನಿಗದಿತ ಸಮಯಕ್ಕೆ ಹಾಜರಿದ್ದ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಕ್ರೀಡಾಪಟುಗಳು ಒಂದೇ ತಾಲೂಕಿನ ಒಂದೇ ಊರಿನ ಆಟಗಾರರಾಗಿರಬೇಕು. ಮದ್ಯ/ಮಾದಕ ವಸ್ತುಗಳನ್ನು ಸೇವಿಸಿದ ಆಟಗಾರರ ತಂಡವನ್ನು ಕೂಡಲೇ ನಿಷೇಧಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮಂಜುನಾಥ ಬಾಗಡೆ, ಹಾಕಿ ತರಬೇತುದಾರರು ಮೊಬೈಲ್ ನಂ-9036533909, ವಿದ್ಯಾ ಕುಲಕರ್ಣಿ, ಸೈಕ್ಲಿಂಗ್ ತರಬೇತುದಾರರು, ಮೊಬೈಲ್ ನಂ-8951936636, ಸುರೇಶ ಸಂಗಮದ, ಮೊಬೈಲ್ ನಂ-9060703554 ಇವರನ್ನು ಸಂಪರ್ಕಿಸಬಹುದಾಗಿದೆ.
ಒಂದು ತಾಲೂಕಿನಲ್ಲಿ ಆಡಿದ ಕ್ರೀಡಾಪಟುಗಳು ಇನ್ನೊಂದು ತಾಲೂಕಿನಲ್ಲಿ ಆಡಲು ಅವಕಾಶ ಇರುವುದಿಲ್ಲ. 17ರಿಂದ 25 ವರ್ಷದ ಕ್ರೀಡಾಪಟುಗಳಿಗೆ ಮಾತ್ರ ಅವಕಾಶವಿರುತ್ತದೆ. ತಾಲೂಕು ಮಟ್ಟದಲ್ಲಿ ನಡೆದ ಕ್ರೀಡೆಗಳಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಮೂಲ ಆಧಾರ್ ಕಾರ್ಡ್ ಕಡ್ಡಾಯವಾಗಿ ಹಾಜರಪಡಿಸಬೇಕು. ಖೋಖೋ, ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾವಳಿಗಳನ್ನು ಮಣ್ಣಿನ ಮೈದಾನದಲ್ಲಿ ಆಡಿಸಲಾಗುವುದು. ಎಲ್ಲಾ ಕ್ರೀಡೆಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಭಾಗವಹಿಸಲು ಅವಕಾಶವಿರುತ್ತದೆ. ನಿರ್ಣಾಯಕರ ನಿರ್ಣಯವೇ ಅಂತಿಮ ನಿರ್ಣಯವಾಗಿರುತ್ತದೆ.



