ರಂಗಭೂಮಿ ಬೆಳವಣಿಗೆಗೆ ಪ್ರೋತ್ಸಾಹ ಅಗತ್ಯ

0
kasapa
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಉತ್ತರ ಕರ್ನಾಟಕ ಭಾಗದಲ್ಲಿ ರಂಗಭೂಮಿ ಶ್ರೀಮಂತವಾಗಿ ಬೆಳೆದು ಬಂದಿದೆ. ಗ್ರಾಮೀಣ ಪ್ರದೇಶದ ರಂಗ ಕಲಾವಿದರು ದೊಡ್ಡಾಟಗಳಲ್ಲಿ ಪೌರಾಣಿಕ ಸನ್ನಿವೇಶಗಳನ್ನು ಅಭಿನಯಿಸಿ ನಮ್ಮ ಪ್ರಾಚೀನ ಸಂಗತಿಗಳನ್ನು ಇಂದಿನ ತಲೆಮಾರಿಗೆ ತಿಳಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ರಾತ್ರೀ ಇಡಿ ಹಬ್ಬದಂತೆ ಆಚರಿಸಲ್ಪಡುತ್ತಿದ್ದ ಈ ಕಲೆ ಇಂದು ಸಮೂಹ ಮಾಧ್ಯಮಗಳ ಭರಾಟೆಯಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ಬಂದಿರುವದು ವಿಷಾದನೀಯ. ಪರಿಷತ್ತಿನಂತಹ ಸಂಸ್ಥೆಗಳು ಪ್ರೋತ್ಸಾಹವನ್ನು ನೀಡುವದು ಅಗತ್ಯ ಎಂದು ಕಲಾವಿಕಾಸ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಸಿ.ಕೆ.ಎಚ್. ಶಾಸ್ತ್ರೀ (ಕಡಣಿ) ತಿಳಿಸಿದರು.

Advertisement

ಅವರು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನ, ಕಸಾಪ ಕಾರ್ಯಾಲಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಜರುಗಿದ ಬಯಲಾಟ ಪ್ರದರ್ಶನ, ರಂಗ ಸಂಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಾಹಿತ್ಯದ ಪ್ರಕಾರಗಳಲ್ಲಿ ನಾಟಕವೇ ರಮ್ಯವಾದದ್ದು. ಇಲ್ಲಿ ನವರಸಗಳನ್ನು ಕಾಣಬಹುದು. ಕಲಾವಿದರು ಆರ್ಥಿಕವಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದರೂ ಕಲೆಯ ಮೇಲಿನ ಆರಾಧನೆಯಿಂದ ಪ್ರವೃತ್ತಿಯಲ್ಲಿ ತೊಡಗಿದ್ದಾರೆ. ಬೆಟಗೇರಿಯ ಹೊಸಗರಡಿ ಜಾನಪದ ಕಲಾಮೇಳದವರು ಕಳೆದ ಐವತ್ತು ವರ್ಷಗಳಿಂದ ಈ ಕಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿರುವದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.

ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಅಶೋಕ ಸುತಾರ ಮಾತನಾಡಿ, ಕಲೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಸರಕಾರ ಹಾಗೂ ಸಂಘ ಸಂಸ್ಥೆಗಳನ್ನು ಪ್ರಯತ್ನಿಸಬೇಕು ಎಂದು ತಿಳಿಸಿದರು. ವಿಜಯ ಕಲಾ ಮಂದಿರ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರಕಾಶ ಅಕ್ಕಿ ಅವರು ಮಾತನಾಡಿ, ಹಿಂದಿನಿಂದಲೂ ಗದಗು ರಂಗಭೂಮಿಗೆ ನೆಲೆಯನ್ನು ಒದಗಿಸಿ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದೆ ಎಂದು ತಿಳಿಸಿದರು. ಬರಹಗಾರ್ತಿ ಶಾರದಾ ಬಾಣದ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬೆಟಗೇರಿ ಹೊಸಗರಡಿ ಜಾನಪದ ಕಲಾಮೇಳದ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಬಯಲಾಟ ಪ್ರದರ್ಶನ ಜರುಗಿತು. ಸಂಸ್ಥೆಯ ಕಲಾವಿದರಾದ ಅಶೋಕ ಸುತಾರ, ಪ್ರಕಾಶ ಬಡಿಗೇರ, ನಿಜಲಿಂಗಪ್ಪ ಕರಿಬಿಷ್ಠಿ, ಮಲ್ಲೇಶಗೌಡ ತಿಮ್ಮನಗೌಡ್ರ, ಬಾಳಪ್ಪ ಮನಗೂಳಿ, ಸುಭಾಸ ಮಳಗಿ, ನಿಖಿತಾ ಸುತಾರ, ಶಂಕ್ರಪ್ಪ ಬಡಿಗೇರ, ಶ್ರೀನಿವಾಸ ಹಡಪದ, ಕೇಶಪ್ಪ ಗೋಂದಕರ, ಅರುಣ ರಾಯಬಾಗಿ, ನೀಲಕಂಠಯ್ಯ ಹಿರೇಮಠ, ಅಂಬರೀಶ ಕರಿಬಿಷ್ಟಿ ಅವರಿಗೆ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.
ಶ್ರೀಕಾಂತ ಬಡ್ಡೂರ ನಿರೂಪಿಸಿದರು. ಶಶಿಕಾಂತ ಕೊರ್ಲಹಳ್ಳಿ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು.

ಕಾರ್ಯಕ್ರಮದಲ್ಲಿ ಡಾ. ಜಿ.ಬಿ. ಪಾಟೀಲ, ಪ್ರೊ. ಕೆ.ಎಚ್.ಬೇಲೂರ, ಸುರೇಶ ಕುಂಬಾರ, ಸಿ.ಎಂ. ಮಾರನಬಸರಿ, ಎಸ್.ಎಂ ಕಾತರಕಿ, ರತ್ನಕ್ಕ ಪಾಟೀಲ, ಪ್ರ.ತೋ. ನಾರಾಯಣಪುರ, ಅಶೋಕ ಸತರಡ್ಡಿ, ಡಾ. ಬಿ.ಬಿ. ಹೊಳಗುಂದಿ, ಬಿ.ಎಸ್. ಹಿಂಡಿ, ಸತೀಶಕುಮಾರ ಚನ್ನಪ್ಪಗೌಡರ, ಡಿ.ಎಸ್. ಬಾಪುರಿ, ಎಸ್.ಎಫ್. ಬೆಣಕಣ್ಣವರ, ರತ್ನಕ್ಕ ಘಾರ್ಗಿ, ಎಸ್.ವಿ. ಬಳ್ಳಿ, ರತ್ನಾ ಪುರಂತರ, ಎಲ್.ಎಂ. ನಿಡವಣಿ, ಶೈಲಜಾ ಗಿಡ್ನಂದಿ, ಆರ್.ಡಿ. ಕಪ್ಪಲಿ, ಬಸವರಾಜ ಗಣಪ್ಪನವರ, ತಿಪ್ಪಾನಾಯ್ಕ ಎಲ್., ಗಂಗಾಧರ ಬಾರಾಟಕ್ಕೆ, ಪರಶುರಾಮ ಬೈಲಪ್ಪನವರ, ಗಣೇಶ ಪಾಟೀಲ, ಅಂದಯ್ಯ ಅರವಟಗಿಮಠ, ಭಾಗ್ಯಶ್ರೀ ಹುರಕಡ್ಲಿ, ಶೈಲಜಾ ಕಪ್ಪರದ, ಪದ್ಮಾ ಕಬಾಡಿ, ರಶ್ಮಿ ಅಂಗಡಿ, ಎಸ್.ವಿ. ಗುತ್ತಿ, ನಿರ್ಮಲಾ ತರವಾಡೆ, ವಿಜಯಲಕ್ಷ್ಮಿ ಅಸುಂಡಿ, ಅಜಿತ ಘೋರ್ಪಡೆ, ಮೌನೇಶ ಬಡಿಗೇರ, ವಿಶ್ವನಾಥ ಕಮ್ಮಾರ, ಎನ್.ಎಚ್. ಹಿರೇಸಕ್ಕರಗೌಡರ, ಎಚ್.ಟಿ. ಸಂಜಿವಸ್ವಾಮಿ, ಕೆ.ಎಸ್. ಗುಗ್ಗರಿ, ಡಾ. ಅಶೋಕ ಮತ್ತಿಗಟ್ಟಿ, ಡಾ. ಎಂ.ಎ. ಮತ್ತಿಗಟ್ಟಿ, ಬಸವರಾಜ ನೇಲಜೇರಿ, ಅಕ್ಕಮ್ಮ ಪಾರ್ವತಿಮಠ, ಉಮಾ ಪಾರ್ವತಿಮಠ, ಶಶಿಕಲಾ ಸಿಂಧೂರ, ರಾಜಶೇಖರ ಕರಡಿ. ಡಾ. ರಾಜೇಂದ್ರ ಗಡಾದ, ಬಿ.ಎಲ್. ಚವ್ಹಾಣ, ಸಿದ್ಧಲಿಂಗೇಶ ಸಜ್ಜನಶೆಟ್ಟರ, ಬಸವರಾಜ ಮನಗೂಳಿ. ಬಿ.ಎಸ್. ಬಣಕಾರ, ಮಧುಸ್ವಾಮಿ ರಾಯಬಾಗ, ಶ್ರೀಕಾಂತ ಬಗಾಡೆ, ಬಿ.ಎಫ್. ಆನಂದರಭಾವಿ, ಶೇಕಣ್ಣ ಕಳಸಾಪೂರಶೆಟ್ಟರ ಮೊದಲಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here