ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮಕ್ಕಳಲ್ಲಿ ಕನ್ನಡದೊಂದಿಗೆ ಆಂಗ್ಲ ಭಾಷಾ ಮಾಧ್ಯಮದಲ್ಲಿಯೂ ಕೌಶಲರಾಗಬೇಕು ಎಂಬ ಉದ್ದೇಶದಿಂದ ಸರಕಾರ ಸರಕಾರಿ ಶಾಲೆಗಳನ್ನು ದ್ವಿಭಾಷಾ ಮಾಧ್ಯಮದ ಶಾಲೆಯನ್ನಾಗಿ ಪರಿವರ್ತಿಸುತ್ತಿರುವುದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವಿ. ನಡುವಿನಮನಿ ಹೇಳಿದರು.

Advertisement

ಇಲ್ಲಿಯ ಮಾರುತಿ ನಗರದ ಸರಕಾರಿ ಹಿರಿಯ ಹೆಣ್ಣು/ಗಂಡು ಮಕ್ಕಳ ಪ್ರಾಥಮಿಕ ಶಾಲೆಗೆ ಮಂಜೂರಾಗಿರುವ ದ್ವಿಭಾಷಾ ಮಾಧ್ಯಮ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಆಂಗ್ಲ ಭಾಷೆ ಮಹತ್ವದ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಸಮಿತಿ, ಶಾಲಾ ಶಿಕ್ಷಕರು, ಗ್ರಾಮ ಪಂಚಾಯಿತಿಯ ಪ್ರಯತ್ನದಿಂದ ಸರಕಾರದಿಂದ ಮಂಜೂರಿಯಾದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಇಂದು ಈ ಶಾಲೆಯಲ್ಲಿ ಪ್ರಥಮವಾಗಿ ಆಂಗ್ಲ ಮಾಧ್ಯಮ ಶಾಲೆಗೆ ಚಾಲನೆ ನೀಡಿದ್ದು ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಸರಕಾರಿ ಶಿಕ್ಷಣ ಯೋಜನೆಗಳು ಕೊನೆಯ ಹಂತದ ಮಗುವಿಗೂ ಸಹ ದೊರೆಯುವಂತೆ ಶಿಕ್ಷಕರು ಗಮನ ಹರಿಸಬೇಕೆಂದು ವಿನಂತಿಸಿದರಲ್ಲದೆ, ತರಗತಿಯ ನಿರ್ವಹಣೆಗೆ ಸಮವಸ್ತ್ರಗಳನ್ನು ಶಿಕ್ಷಕಿ ಎಸ್.ಎಂ. ಹೊಸಮನಿ ಹಾಗೂ ಲೇಖನ ಸಾಮಗ್ರಿಗಳನ್ನು ಮುಖ್ಯೋಪಾಧ್ಯಾಯ ಕೆ.ಬಿ. ಕೊಣ್ಣೂರು ಅವರು ನೀಡಿದನ್ನು ಸ್ಮರಿಸಿದರು.

ತಾ.ಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ, ದತ್ತಾತ್ರೇಯ ಜೋಶಿ, ವೀರಯ್ಯ ಗಂಧಧ, ಗ್ರಾ.ಪಂ ಸದಸ್ಯರಾದ ಶಿವಣ್ಣ ಬಳಿಗೇರ, ಲಕ್ಷ್ಮಣ ಗುಡಸಲಮನಿ, ವಿರೂಪಾಕ್ಷಪ್ಪ ಬೆಟಗೇರಿ, ಫಕೀರಮ್ಮ ಬೇಲೇರಿ, ಹನುಮಂತಪ್ಪ ಬಂಗಾರಿ, ಅಕ್ಷರ ದಾಸೋಹಾಧಿಕಾರಿ ಶಂಕರ ಹಡಗಲಿ, ಪಿ.ಡಿ.ಒ ಅಮೀರನಾಯಕ, ಬಸವರಾಜ ಮುಳ್ಳಾಳ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಾಂತೇಶ ಗುರಿಕಾರ, ಮಂಜುಳಾ ಗಡ್ಡಿ, ಮಂಜುನಾಥ ಕಟಿಗ್ಗಾರ, ಗ್ರಾ.ಪಂ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಕೆ.ಬಿ. ಕೊಣ್ಣೂರು ಸ್ವಾಗತಿಸಿದರು. ಅಶ್ವಿನಿ ಕೆ.ವಿ ನಿರೂಪಿಸಿದರು. ಪುಷ್ಪಾ ಪ್ರಭು ವಂದಿಸಿದರು.


Spread the love

LEAVE A REPLY

Please enter your comment!
Please enter your name here