ಮನರಂಜಿಸಿದ ಕುಸ್ತಿ ಸ್ಪರ್ಧೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಹಾಲಗೊಂಡ ಬಸವೇಶ್ವರ ಜಾತ್ರೆಯ ಅಂಗವಾಗಿ ಮೂರು ದಿನಗಳ ಕಾಲ ನಡೆದ ಬಯಲು ಕುಸ್ತಿ ಸ್ಪರ್ಧೆಗಳು ಕುಸ್ತಿ ಪ್ರೇಮಿಗಳ ಮನರಂಜಿಸಿದವು.

Advertisement

ಇಲ್ಲಿಯ ಕೆ.ಜಿ.ಎಸ್ ಶಾಲೆಯ ಮೈದಾನದಲ್ಲಿ ನಡೆದ ಕುಸ್ತಿ ಸ್ಪರ್ಧೆಗಳು ಹಾಲಗೊಂಡ ಬಸವೇಶ್ವರ ಸೇವಾ ಸಮಿತಿ ಹಾಗೂ ಮಾಜಿ ಕುಸ್ತಿ ಪೈಲವಾನರ ಆಶ್ರಯದಲ್ಲಿ ಜರುಗಿದವು. ವಾರಗಿ ಪೈಕಿ ಕುಸ್ತಿ ಸ್ಪರ್ದೆಯಲ್ಲಿ 30 ಸ್ಪರ್ಧಾಳುಗಳು ಭಾಗವಹಿಸಿ ತಮ್ಮ ಹಲವಾರು ಹಿಡಿತದಲ್ಲಿ ಕುಸ್ತಿ ಆಡಿದರು. ಆದರೆ ಕೊನೆಯ ದಿನದ ಸ್ಪರ್ಧೆಯಲ್ಲಿ ಹೆಚ್ಚಾಗಿ ಸಮ ಸ್ಪರ್ಧೆಗಳು ನಡೆದವು. ಇನ್ನೂ ಅಂತಿಮ ಪರ್ಶಿ ಪೈಕಿ ಸ್ಪರ್ಧೆ ಗುಲಬರ್ಗಾದ ಸಿದ್ದಪ್ಪ ಹಾಗೂ ಡಾವಣಗೇರಿಯ ಪ್ರಕಾಶ ನಡುವೆ ನಡೆಯಿತು. ಸಂಜೆ 7.30ರವರೆಗೂ ನಡೆದ ಸ್ಪರ್ಧೆಯಲ್ಲಿ ಕೊನೆಗೆ ಸಿದ್ದಪ್ಪ ಅವರು ಸೆಣಸಲಾಗದೇ ಪ್ರಕಾಶ ಪೈಲವಾನನಿಗೆ ಬಿಟ್ಟು ಕೊಟ್ಟಿದ್ದರಿಂದ ಪ್ರಕಾಶ ಅಂತಿಮ ಪಂದ್ಯದ ವಿಜಯಿಯಾಗಿ ಹೊರಹೊಮ್ಮಿದರು.

ಗದಗ, ಧಾರವಾಡ, ಗುಲಬುರ್ಗಾ, ಹಾವೇರಿ, ಡಾವಣಗೇರಿ, ವಿಜಯಪೂರದ ಪೈಲವಾನರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜಾತ್ರಾ ಕಮಿಟಿಯ ಎಸ್.ಬಿ. ಕಲಕೇರಿ, ಎಂ.ಎನ್. ಉಮಚಗಿ, ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ವೀರಯ್ಯ ಗಂದಧ, ಬಿ.ಐ. ಕಿರಟಗೇರಿ, ರಮೇಶ ಭಾವಿ, ವಿರೂಪಾಕ್ಷಪ್ಪ ಬೆಟಗೇರಿ, ಶಂಕ್ರಪ್ಪ ಮಾಲ್ವಿ, ಈರಣ್ಣ ತಿಮ್ಮಾಪೂರ, ಅಂಕಲೆಪ್ಪ ಬಾಳೆಕಟ್ಟಿ, ಪ್ರವೀಣ ಕಲಾಲ ಸೇರಿದಂತೆ ಗಣ್ಯರು, ಹಿರಿಯರು ಉಪಸ್ಥಿತರಿದ್ದರು. ಮಾಜಿ ಪೈಲವಾನರಾದ ನಾಗರಾಜ ಖಂಡು, ನಿಂಗಯ್ಯ ಕಲ್ಮಠ ಮೇಲ್ವಿಚಾರಕ ನಿರ್ಣಾಯಕರಾಗಿದ್ದರು.


Spread the love

LEAVE A REPLY

Please enter your comment!
Please enter your name here