HomeGadag Newsಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದ್ದು, ನಾವಿಂದು ಬದ್ಧತೆಯಿಂದ ಪರಿಸರ ಸಂರಕ್ಷಣೆಗೆ ಮುಂದಾಗುವದು ಎಂದಿಗಿಂತ ಹೆಚ್ಚು ಅವಶ್ಯವಿದೆ ಎಂದು ಕಾಂಗ್ರೆಸ್‌ನ ಯುವ ಧುರೀಣ ಕೃಷ್ಣಗೌಡ ಪಾಟೀಲ ಹೇಳಿದರು.

ಅವರು ಗುರುವಾರ ಗದುಗಿನ ನಂದೀಶ್ವರ ನಗರದ 2 ಮತ್ತು 3ನೇ ಕ್ರಾಸ್ (ಇಂಡೋರ್ ಸ್ಟೇಡಿಯಂ ಬಡಾವಣೆ) ನಾಗರಿಕರ ವಿವಿಧೋದ್ದೇಶಗಳ ಸಂಘ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದಿನ ಸಮಾಜಕ್ಕೆ ಪರಿಸರದ ಅವಶ್ಯಕತೆ ತುಂಬಾ ಇದೆ. ಇಂದು ವಾತಾವರಣ ಹಲವಾರು ಕಾರಣದಿಂದ ಕಲುಷಿತಗೊಂಡಿದೆ. ಈ ವಾತಾವರಣವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಮುಂದಿನ ಪೀಳಿಗೆಗೆ ಉತ್ತಮವಾದ ಪರಿಸರವನ್ನು ಕೊಡುಗೆಯಾಗಿ ನೀಡಲು ನಾವೆಲ್ಲರೂ ಶ್ರಮಿಸೋಣ. ಈ ಬಡಾವಣೆಯಲ್ಲಿ ಸಚಿವರ ಹಾಗೂ ಪ್ರಾಧಿಕಾರದಿಂದ ಮಾದರಿ ಉದ್ಯಾನವನವನ್ನು ನಿರ್ಮಿಸಲು ಸಹಕಾರ ನೀಡುವ ಭರವಸೆ ನೀಡಿದರು.

ನಂದೀಶ್ವರ ನಗರದ ಬಡಾವಣೆಯ ಜಿಲ್ಲಾ ಗೌರವಾಧ್ಯಕ್ಷ ಜಿ.ಎಸ್. ಹಿರೇಮಠ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾ ಅಧ್ಯಕ್ಷ ಅಶೋಕ ಮಂದಾಲಿ, ನಗರಸಭೆ ಮಾಜಿ ಸದಸ್ಯ ಅನಿಲ್ ಗರಗ ಆಗಮಿಸಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿಶ್ವನಾಥರೆಡ್ಡಿ ಗದ್ದಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಬಿ.ಎಚ್. ಕೊರ್ಲಹಳ್ಳಿ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಇಂಡೋರ್ ಸ್ಟೇಡಿಯಂ ಬಡಾವಣೆಯ ಉಪಾಧ್ಯಕ್ಷ ಶಿವಾನಂದ ಪಲ್ಲೇದ, ರಾಚಯ್ಯ ಕರವೀರಮಠ ಎಸ್.ವೈ. ಯಾಳಗಿಶೆಟ್ರು, ಡಾ. ರವಿ ನಂದಿ, ಅಶೋಕ ಮಾಳೆಕೊಪ್ಪ, ಡಿ.ಬಿ. ಚೆನ್ನಶೆಟ್ಟಿ, ಹೊಳೆಯಪ್ಪಗೌಡ ಪಾಟೀಲ, ನಿಂಗರಾಜ ಗೊಲ್ಲರ, ಸಿದ್ದರಾಮೇಶ ಹಿರೇಮಠ, ನೀಲಕಂಠಯ್ಯ ಕಳ್ಳಿಮಠ, ವಿ.ಎಸ್. ಶಿವಕಾಳಿಮಠ, ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಬಡಾವಣೆಯ ಸದಸ್ಯರು, ಮಹಿಳೆಯರು, ಸಾರ್ವಜನಿಕರು ಭಾಗವಹಿಸಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!