ಮೈಸೂರು: ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾದರೂ ಇಸ್ಲಾಮಿಕ್ ದೇಶಗಳು ಅದರ ಜೊತೆ ನಿಲ್ಲಲಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಒಂದು ಮುಸ್ಲಿಂ ರಾಷ್ಟ್ರವಾದರೂ ಭಾರತದೊಂದಿಗೆ ಯುದ್ಧ ಮಾಡುವಾಗ ಇಸ್ಲಾಮಿಕ್ ರಾಷ್ಟ್ರಗಳ್ಯಾವೂ ಅದರ ಜೊತೆ ನಿಲ್ಲಲಿಲ್ಲ, ಭಯೋತ್ಪಾದನೆಯಿಂದ ಆ ರಾಷ್ಟ್ರಗಳು ಅಷ್ಟು ಬೇಸತ್ತಿವೆ ಎಂದು ಹೇಳಿದರು.
ಇನ್ನೂ ಮೈಸೂರಿನಲ್ಲಿ ಒಂದು ಕ್ರಿಕೆಟ್ ಸ್ಟೇಡಿಯಂ ಬೇಕು ಎಂಬ ನಿರ್ಣಯಕ್ಕೆ ಕೆಎಸ್ಸಿಎ ಬಂದಿತ್ತು. ನಂತರ ಕೆಎಸ್ಸಿಎ ಅಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ನಂತರ ಸರ್ಕಾರಕ್ಕೆ ಮನವಿ ಮಾಡಲಾಯಿತು.
ಆಗ ಬಿಜೆಪಿ ಸರ್ಕಾರ ಇತ್ತು. ಭೂಮಿ ಗುರುತಿಸಲಾಗಿದೆ, ಅದನ್ನು ಸ್ವಾಧೀನಪಡಿಸಿಕೊಳ್ಳಲು ನೆರವಾಗಬೇಕು ಎಂದು ಕೆಎಸ್ಸಿಎ ಮನವಿ ಮಾಡಿತ್ತು. ಅದು ಬಹಳ ವಿಳಂಬ ಆಗುತ್ತಿತ್ತು. ಆ ಬಳಿಕ ಜಿಲ್ಲಾಧಿಕಾರಿ ಭೂಮಿ ಗುರುತಿಸಿದ್ದರು. ಮುಖ್ಯಮಂತ್ರಿ ಬಳಿ ನಾವು ಮನವಿ ಮಾಡಿದ್ದು, ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.