ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ : ತಾಲೂಕಿನ ಗೋವನಾಳ, ಗುಲಗಂಜಿಕೊಪ್ಪ ಗ್ರಾಮ ವ್ಯಾಪ್ತಿಯ ರೈತರ ಹೊಲಗಳಲ್ಲಿರುವ ಬೆಳಗಳಿಗೆ ಮುಳ್ಳುಹಂದಿ, ಚಿಗರಿ, ಮಂಗಗಳ ಕಾಟ ವಿಪರೀತವಾಗಿದ್ದು ಬೆಳೆ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಲಕ್ಷೇಶ್ವರ ತಾಲೂಕು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಟಾಕಪ್ಪ ಸಾತಪುತೆ ನೇತೃತ್ವದಲ್ಲಿ ರೈತರು ಸೋಮವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಗುಲಗಂಜಿಕೊಪ್ಪ ಗ್ರಾಮದಲ್ಲಿರುವ ರೈತರು ಬಿತ್ತನೆ ಮಾಡಿದ ಮೆಕ್ಕೆ ಜೋಳ, ಶೇಂಗಾ, ಹತ್ತಿ, ಮೆಣಸಿನಕಾಯಿ ಬೆಳೆಗಳನ್ನು ಮುಳ್ಳುಹಂದಿಗಳು, ಚಿಗರಿ, ಮಂಗಗಳು ಹಾಳು ಮಾಡುತ್ತಿವೆ. ಸಾವಿರಾರು ರೂ ಖರ್ಚು ಮಾಡಿ ಬಿತ್ತಿದ ಬೀಜಗಳನ್ನು ರಾತ್ರೋರಾತ್ರಿ ಭೂಮಿಯಿಂದ ಅಗೆದು ತಿಂದು ಸಸಿಗಳು ಹುಟ್ಟದಂತೆ ನಾಶಪಡಿಸುತ್ತಿವೆ. ಅಳಿದುಳಿದ ಮೊಳಕೆ ಸಸಿಗಳನ್ನು, ಚಿಗುರನ್ನೂ ಸಹ ತಿನ್ನುತ್ತವೆಯಾದ್ದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹಗಲು-ರಾತ್ರಿ ಎನ್ನದೇ ಕಾಯುತ್ತಿದ್ದರೂ ಕೂಡಾ ಇವುಗಳ ಕಾಟವು ತಪ್ಪುತ್ತಿಲ್ಲ.
ಇನ್ನಾದರೂ ರೈತರ ಬಗ್ಗೆ ನಿರ್ಲಕ್ಷ ತೋರದೇ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಮತ್ತು ಬೆಳೆಹಾನಿ ಪರಿಹಾರ ಕಲ್ಪಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಗ್ರಾ.ಪಂ ಅಧ್ಯಕ್ಷ ಮಂಜನಗೌಡ ಕೆಂಚನಗೌಡ್ರ, ರೈತರಾದ ಎನ್.ಎಸ್. ಪಾಟೀಲ, ಅಣ್ಣಪ್ಪ ರಾಮಗೇರಿ, ನಿಂಗನಗೌಡ ಪಾಟೀಲ, ನಿಂಗಪ್ಪ ಶಿವಬಸಣ್ಣವರ, ಸೋಮನಗೌಡ ಕೊರಡೂರ, ಚಂದ್ರಗೌಡ ಕರೆಗೌಡ್ರ, ಕರಿಯಪ್ಪಗೌಡ್ರ ಹೊಸಗೌಡ್ರ, ವಸಂತಗೌಡ ಕರೆಗೌಡ್ರ, ಬಿ.ಎನ್. ರೊಟ್ಟಿಗವಾಡ, ಬಸವರಾಜ ಕುರುಬರ, ಗಂಗಾಧರ ಮಾದರ, ಮಂಜು ಮಾದರ, ರಮೇಶ ಧೂಳಮ್ಮನವರ, ನಿಂಗಪ್ಪ ತಿಮ್ಮಾಪುರ, ದಿಳ್ಳಪ್ಪ ಉಳ್ಳಟ್ಟಿ, ಸಿದ್ದಪ್ಪ ಹೊಸಮನಿ, ನಾಗರಾಜ ಪಾಟೀಲ, ಮಾಲತೇಶ ಪಾಟೀಲ, ಮಾಂತೇಶ ಬಮ್ಮನಕಟ್ಟಿ ಮುಂತಾದವರಿದ್ದರು.