ಗದಗ: ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಅಬಕಾರಿ ಪೊಲೀಸರು ದಾಳಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗದಗ ತಾಲೂಕಿನ ತಿಮ್ಮಾಪುರ ಗ್ರಾಮದ ಹರಣಶಿಕಾರಿ ಕಾಲೋನಿಯಲ್ಲಿರುವ ಬಾಲಪ್ಪ ಪುನೋಜಪ್ಪ ಹರಣಶಿಕಾರಿ ಎಂಬುವವನಿಗೆ ಸೇರಿದ ವಾಸದ ಮನೆಯ ಮೇಲೆ ಅಬಕಾರಿ ದಾಳಿ ನಡೆಸಿ, ಅಂದಾಜು 15 ಸಾವಿರ ರೂ. ಮೌಲ್ಯದ 54 ಪೌಚ್‌ಗಳಲ್ಲಿಯ ಒಟ್ಟು 348 ಗ್ರಾಂ ಒಣಗಿದ ಗಾಂಜಾವನ್ನು ಜಪ್ತಿ ಮಾಡಲಾಗಿದೆ.
ಅಪರ ಅಬಕಾರಿ ಆಯುಕ್ತರು, ಅಪರಾಧ ಕೇಂದ್ರಸ್ಥಾನ ಬೆಳಗಾವಿ ಇವರ ನಿರ್ದೇಶದನಲ್ಲಿ, ಅಬಕಾರಿ ಜಂಟಿ ಆಯುಕ್ತರು, ಹೊಸಪೇಟೆ ವಿಭಾಗ ಮತ್ತು ಅಬಕಾರಿ ಉಪ ಆಯುಕ್ತರು, ಉಪ ಅಧೀಕ್ಷಕರು ಗದಗ ಇವರ ಮಾರ್ಗದರ್ಶನದಲ್ಲಿ ಗದಗ ವಲಯದ ಅಬಕಾರಿ ನಿರೀಕ್ಷಕಿ ನೇತ್ರಾ ಉಪ್ಪಾರ, ಸಿಬ್ಬಂದಿಗಳಾದ ಆಶಾರಾಣಿ ಗುಡದಾರ, ಪೇದೆಗಳಾದ ನಜೀರಸಾಬ ಖುದಾವಂದ, ಮಂಜುನಾಥಗೌಡ ರಾಯನಗೌಡ್ರ, ಅಂಬೋಜಿ ಹಾಳಕೇರಿ, ಚಾಲಕ ರಮೇಶ ಬೆಣಗಿ ಮತ್ತು ಪಂಚರುಗಳೊಂದಿಗೆ ರಾತ್ರಿ ದಾಳಿ ನಡೆಸಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿಗಳಾದ ತಿಮ್ಮಾಪುರ ಗ್ರಾಮದ ಬಾಲಪ್ಪ ಪುನೋಜಪ್ಪ ಹರಣಶಿಕಾರಿ(52) ಹಾಗೂ ರೋಣ ತಾಲೂಕಿನ ಅಬ್ಬಿಗೇರಿಯ ಯಲ್ಲಪ್ಪ ಫಕ್ಕೀರಪ್ಪ ತೊಂಡಿಹಾಳ(37) ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗದಗ ವಲಯ ಕಚೇರಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.